ADVERTISEMENT

ದೇಶಿ ವಾಹನ ಉದ್ಯಮಕ್ಕೆ ವೈರಸ್‌ ಅಡ್ಡಗಾಲು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 15:33 IST
Last Updated 19 ಫೆಬ್ರುವರಿ 2020, 15:33 IST

ಮಂದಗತಿಯ ಆರ್ಥಿಕ ಬೆಳವಣಿಗೆ, ನಗದು ಬಿಕ್ಕಟ್ಟಿನಿಂದಾಗಿ ಮಾರಾಟದಲ್ಲಿ ಕುಸಿತ ಎದುರಿಸುತ್ತಿರುವ ವಾಹನ ಉದ್ಯಮಕ್ಕೆ ಇದೀಗ ಚೀನಾದ ವೈರಸ್‌ ‘ಕೋವಿಡ್‌–19’ ದೊಡ್ಡ ಪ್ರಮಾಣದಲ್ಲಿ ಹೊಡೆತ ನೀಡಲಿದೆ.

ವೈರಸ್‌ನಿಂದಾಗಿ ಭಾರತದ ವಾಹನ ಉದ್ಯಮವು ಈ ವರ್ಷ ಅತಿ ಹೆಚ್ಚಿನ ಸಮಸ್ಯೆ ಎದುರಿಸಲಿದೆ.ವಾಹನ ತಯಾರಿಕೆ ಶೇ 8.3ರಷ್ಟು ಕುಸಿತ ಕಾಣಲಿದೆ ಎಂದು ಫಿಚ್‌ ಹೇಳಿದೆ.

ವಾಹನ ತಯಾರಿಕೆಗೆ ಅಗತ್ಯವಾದ ಬಹುತೇಕ ಬಿಡಿಭಾಗಗಳು ಚೀನಾದಿಂದಲೇ ಪೂರೈಕೆಯಾಗಬೇಕು. ಆದರೆ, ವೈರಸ್‌ ಸೋಂಕು ಹರಡುವುದನ್ನು ತಡೆಯಲು ಅಲ್ಲಿನ ಕಾರ್ಖಾನೆಗಳು ತಾತ್ಕಾಲಿಕವಾಗಿ ಬಾಗಿಲು ಮುಚ್ಚಿವೆ. ಇದರಿಂದಾಗಿ ಭಾರತದ ಕಂಪನಿಗಳ ತಯಾರಿಕೆಯ ವೇಗಕ್ಕೆ ಕಡಿವಾಣ ಬೀಳುವ ಅಥವಾ ತಯಾರಿಕೆಯನ್ನೇ ನಿಲ್ಲಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಲಿದೆ ಎಂದು ವಿಶ್ಲೇಷಿಸಿದೆ.

ADVERTISEMENT

ಭಾರತದಲ್ಲಿ ಹೊಸ ವಾಹಗಳಿಗೆ ಬೇಡಿಕೆ ದುರ್ಬಲವಾಗಿದೆ. ಹೀಗಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ತಯಾರಿಕೆ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಎಂದೂ ಹೇಳಿದೆ.

10–30%:ಚೀನಾವು ಭಾರತಕ್ಕೆ ಪೂರೈಸುತ್ತಿರುವ ಬಿಡಿ ಭಾಗಗಳ ಪ್ರಮಾಣ

8.3%:2020ಕ್ಕೆ ತಯಾರಿಕೆಯಲ್ಲಿ ಆಗಲಿರುವ ಇಳಿಕೆ

13.2%:2019ರಲ್ಲಿ ತಯಾರಿಕೆಯಲ್ಲಿ ಆಗಿರುವ ಇಳಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.