ADVERTISEMENT

ಡಿಪ್ಲೋಸ್ ಮ್ಯಾಕ್ಸ್+ ಹೆಸರಿನ ನೂತನ ಇ–ಸ್ಕೂಟರ್ ಬಿಡುಗಡೆ: ಏನಿದರ ವಿಶೇಷತೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಸೆಪ್ಟೆಂಬರ್ 2025, 6:42 IST
Last Updated 26 ಸೆಪ್ಟೆಂಬರ್ 2025, 6:42 IST
<div class="paragraphs"><p>ಡಿಪ್ಲೋಸ್ ಮ್ಯಾಕ್ಸ್+ ಇ–ಸ್ಕೂಟರ್</p></div>

ಡಿಪ್ಲೋಸ್ ಮ್ಯಾಕ್ಸ್+ ಇ–ಸ್ಕೂಟರ್

   

ಬೆಂಗಳೂರು: ದೇಶೀಯವಾಗಿ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಯಲ್ಲಿ ಪರಿಣತಿ ಹೊಂದಿರುವ ನ್ಯುಮೆರೋಸ್ ಮೋಟಾರ್ಸ್ ಇಂದು (ಶುಕ್ರವಾರ) ತನ್ನ ಬಹುಪಯೋಗಿ ಇ-ಸ್ಕೂಟರ್ 'ಡಿಪ್ಲೋಸ್ ಮ್ಯಾಕ್ಸ್'ನ ಸುಧಾರಿತ ಆವೃತ್ತಿಯಾದ 'ಡಿಪ್ಲೋಸ್ ಮ್ಯಾಕ್ಸ್+' ಅನ್ನು ಬಿಡುಗಡೆ ಮಾಡಿದೆ.

4.0 kWh ಸಾಮರ್ಥ್ಯದ ಡ್ಯುಯಲ್ ಲಿಕ್ವಿಡ್ ಇಮ್ಮರ್ಶನ್ ಕೂಲಿಂಗ್ ಬ್ಯಾಟರಿ ಪ್ಯಾಕ್, ಗಂಟೆಗೆ 70 ಕಿ.ಮೀ. ಗರಿಷ್ಠ ವೇಗ, 156 ಕಿ.ಮೀ ಗಳ (IDC) ಸುಧಾರಿತ ರೇಂಜ್ ಮತ್ತು ಹೆಚ್ಚಿನ ಪಿಕ್-ಅಪ್ ನೀಡುವುದು ಇದರ ಪ್ರಮುಖ ಆಕರ್ಷಣೆಗಳಾಗಿವೆ.

ADVERTISEMENT

ಬೆಲೆ ಎಷ್ಟು?

ಈ ಸ್ಕೂಟರ್ ಬ್ಲೇಜ್ ರೆಡ್, ಪಿಯಾನೋ ಬ್ಲ್ಯಾಕ್ ಮತ್ತು ವೋಲ್ಟ್ ಬ್ಲೂ ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ಸುರಕ್ಷತೆ, ವಿಶ್ವಾಸಾರ್ಹತೆ ಮತ್ತು ಬಾಳಿಕೆಯ ತತ್ವಗಳನ್ನು ಒಳಗೊಂಡಿರುವ ಈ ವಾಹನಗಳು ಗ್ರಾಹಕರ ವಿವಿಧ ಅಗತ್ಯತೆಗಳನ್ನು ಪೂರೈಸಲು ಸೂಕ್ತವಾಗಿವೆ. ಡಿಪ್ಲೋಸ್ ಮ್ಯಾಕ್ಸ್+ ನ ಬೆಂಗಳೂರು ಎಕ್ಸ್-ಶೋರೂಂ ಬೆಲೆ ₹1,14,999 ಆಗಿದೆ.

ವಿವಿಧ ಭೂಪ್ರದೇಶಗಳನ್ನು ಒಳಗೊಂಡು ಈ ಸ್ಕೂಟರ್‌ ಈವರೆಗೂ 14 ಲಕ್ಷ ಕಿ.ಮೀ. ದೂರವನ್ನು ಕ್ರಮಿಸುವ ಮೂಲಕ ಯಶಸ್ವಿಯಾಗಿ ಪ್ರಯೋಗಾರ್ಥ ಪರೀಕ್ಷೆ ನಡೆಸಿದೆ.

ಇದರ ಮೂರು ಪ್ರಮುಖ ತತ್ವಗಳು

ಕಾರ್ಯಕ್ಷಮತೆ: 156 ಕಿ.ಮೀ. (IDC) ಸುಧಾರಿತ ರೇಂಜ್ ಮತ್ತು ಗಂಟೆಗೆ 70 ಕಿ.ಮೀ ಗರಿಷ್ಠ ವೇಗ.

ಸುರಕ್ಷತೆ: ಡ್ಯುಯಲ್ ಡಿಸ್ಕ್ ಬ್ರೇಕ್‌ಗಳು, ಹೈ-ಪರ್ಫಾರ್ಮೆನ್ಸ್ ಎಲ್‌ಇಡಿ ಲೈಟಿಂಗ್ ಮತ್ತು ಕಳ್ಳತನದ ಎಚ್ಚರಿಕೆ, ಜಿಯೋಫೆನ್ಸಿಂಗ್, ಮತ್ತು ವಾಹನ ಟ್ರ್ಯಾಕಿಂಗ್‌ನಂತಹ ಸುಧಾರಿತ ಸ್ಮಾರ್ಟ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ವಿಶ್ವಾಸಾರ್ಹತೆ: ಚಾಸಿಸ್, ಬ್ಯಾಟರಿ, ಮೋಟಾರ್, ಮತ್ತು ಕಂಟ್ರೋಲರ್‌ನಂತಹ ವ್ಯವಸ್ಥೆಗಳನ್ನು ದೀರ್ಘಕಾಲೀನ ಅತ್ಯುತ್ತಮ ಕಾರ್ಯಕ್ಷಮತೆಗಾಗಿ ವಿನ್ಯಾಸಗೊಳಿಸಲಾಗಿದೆ.

ಬಾಳಿಕೆ: ದೃಢವಾದ ಚೌಕಾಕಾರದ ಚಾಸಿಸ್ ಮತ್ತು ಅಗಲವಾದ ಟೈರ್‌ಗಳು ದೀರ್ಘಕಾಲ ಬಾಳಿಕೆ ಬರುವಂತೆ ವಿನ್ಯಾಸಗೊಳಿಸಲಾಗಿದೆ ಮತ್ತು ವಿವಿಧ ಭೂಪ್ರದೇಶಗಳಲ್ಲಿ ಉತ್ತಮ ಹಿಡಿತವನ್ನು ನೀಡುತ್ತವೆ.

ಸ್ಕೂಟರ್ ಬಿಡುಗಡೆ ಕುರಿತು ಮಾತನಾಡಿದ ನ್ಯುಮೆರೋಸ್ ಮೋಟಾರ್ಸ್‌ನ ಸಂಸ್ಥಾಪಕ ಮತ್ತು ಸಿಇಒ ಶ್ರೇಯಸ್ ಶಿಬುಲಾಲ್, ನ್ಯುಮೆರೋಸ್ ಮೋಟಾರ್ಸ್ ಗ್ರಾಹಕರ ಅನುಕೂಲಕ್ಕಾಗಿ ತನ್ನ ಮಾರಾಟ ಮತ್ತು ಸೇವಾ ಜಾಲವನ್ನು ಸಕ್ರಿಯವಾಗಿ ವಿಸ್ತರಿಸುತ್ತಿದೆ. ಪ್ರಸ್ತುತ, ಇದು 14 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, 2026-27ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ 50 ನಗರಗಳಲ್ಲಿ ಕನಿಷ್ಠ 100 ಡೀಲರ್‌ಗಳನ್ನು ಹೊಂದುವ ಗುರಿ ಹೊಂದಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.