ADVERTISEMENT

ಬ್ರಿಟನ್‌ನ ಸೂಪರ್‌ ಕಾರು Lanzante ಲೋಗೊ ಚತುರ್ಭುಜ ಗಣೇಶ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಆಗಸ್ಟ್ 2025, 7:46 IST
Last Updated 29 ಆಗಸ್ಟ್ 2025, 7:46 IST
<div class="paragraphs"><p>ಬ್ರಿಟನ್‌ನ ಸೂಪರ್‌ ಕಾರು Lanzante ಲೋಗೊ ಚತುರ್ಭುಜ ಗಣೇಶ!</p></div>

ಬ್ರಿಟನ್‌ನ ಸೂಪರ್‌ ಕಾರು Lanzante ಲೋಗೊ ಚತುರ್ಭುಜ ಗಣೇಶ!

   

ಬೆಂಗಳೂರು: ಗಣೇಶ, ಗಣಪತಿ, ವಿಘ್ನ ನಿವಾರಕ ಹೀಗೆ ಹಲವು ಹೆಸರುಗಳಿಂದ ಕರೆಸಿಕೊಳ್ಳುವ ಪಾರ್ವತಿ ಪುತ್ರ, ಭಾರತೀಯರಿಗೆ ಅಚ್ಚುಮೆಚ್ಚಿನ ದೇವರು. ಮೊದಲ ಪೂಜಿಪನಾದ ಈ ಗಣೇಶನನ್ನು ಬ್ರಿಟನ್‌ನ ಸೂಪರ್‌ಕಾರ್‌ ಕಂಪನಿಯೊಂದು ಲೋಗೊ ಆಗಿ ಬಳಸಿಕೊಂಡಿದೆ. 

ಬ್ರಿಟನ್‌ನ ಜನಪ್ರಿಯ ಸೂಪರ್‌ಕಾರು ಮತ್ತು ಮೊಟೊಸ್ಪೋರ್ಟ್‌ ಕಾರುಗಳಿಗೆ ಬ್ರ್ಯಾಂಡ್‌ ಆಗಿರುವ ‘ಲ್ಯಾನ್ಜೆಂಟ್’ (Lanzante) ಕಂಪನಿ ಚತುರ್ಭುಜ ಗಣೇಶನನ್ನು ತನ್ನ ಲೋಗೊವನ್ನಾಗಿ ಬಳಸಿದೆ.

ADVERTISEMENT

ಕಾರು ಕಂಪನಿಯ ಸ್ಥಾಪಕ ಪೌಲ್‌ ಲ್ಯಾನ್ಜೆಂಟ್. ಇವರಿಗೆ ಗಣೇಶ ಮೂರ್ತಿಯನ್ನು ಲೋಗೊವಾಗಿ ಬಳಸುವ ಕಲ್ಪನೆಯನ್ನು ಬ್ರಿಟನ್‌ನ ರಾಕ್ ಸಂಗೀತ ತಂಡ ‘ದಿ ಬೀಟಲ್ಸ್‌’ನ ಗಾಯಕ ಜಾರ್ಜ್ ಹ್ಯಾರಿಸನ್ ಸೂಚಿಸಿದ್ದರು ಎಂದು ಅಂತರರಾಷ್ಟ್ರೀಯ ಮಾಧ್ಯಮಗಳ ವರದಿ ತಿಳಿಸಿದೆ.

ಗಣೇಶನನ್ನು ಅದೃಷ್ಟದ ಸಂಕೇತ. ಸಂಕಷ್ಟ, ಅಡೆತಡೆಗಳನ್ನು ನಿವಾರಿಸುತ್ತಾನೆ. ಸೂಪರ್‌ ಕಾರು ತಯಾರಿಕೆಯಲ್ಲಿನ ಎಲ್ಲಾ ಸವಾಲುಗಳನ್ನು ನಿವಾರಿಸಿದ್ದರಿಂದ ಈ ಕಾರಿಗೆ ಈ ಲೋಗೊವೇ ಸೂಕ್ತ ಎಂದು ಹ್ಯಾರಿಸ್‌ ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.

1970ರಲ್ಲಿ ಆರಂಭವಾದ ಈ ಬ್ರಿಟಿಷ್‌ ಕಾರು ಕಂಪನಿಯು, Lotus 2-Eleven, McLaren P1 GTR-LM, McLaren P1 GT ಸೇರಿದಂತೆ ಹಲವು ಮಾದರಿಯ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.