ಪ್ರಾತಿನಿಧಿಕ ಚಿತ್ರ
ನವದೆಹಲಿ: ಕಳೆದ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರ ಕೈಗೊಂಡಿದ್ದ ಜಿಎಸ್‌ಟಿ ಸುಧಾರಣೆಯಿಂದ ಕಾರುಗಳ ಖರೀದಿಯಲ್ಲಿ ಜಿಗಿತ ಕಂಡರೂ, ಈ ಖರೀದಿದಾರರಲ್ಲಿ ಸುಮಾರು ಶೇ 82 ರಷ್ಟು ಗ್ರಾಹಕರು ತೆರಿಗೆ ಪ್ರಯೋಜನಗಳ ಲಾಭಗಳೊಂದಿಗೆ ಉನ್ನತ ದರ್ಜೆಯ ಕಾರುಗಳನ್ನು ಖರೀದಿಸಿದ್ದಾರೆ ಎಂದು ಅಧ್ಯಯನ ವರದಿಯೊಂದು ಕಂಡುಕೊಂಡಿದೆ.
SmyttenPulse AI ಎಂಬ ಸಂಸ್ಥೆ ಸುಮಾರು 5 ಸಾವಿರ ಗ್ರಾಹಕರನ್ನು ತನ್ನ ಸಮೀಕ್ಷೆಯಲ್ಲಿ ತೊಡಗಿಸಿಕೊಂಡು ಅಧ್ಯಯನ ವರದಿ ನೀಡಿದೆ.
ಹೀಗೆ ಕಾರು ಖರೀದಿಸಿದ ಗ್ರಾಹಕರಿಗೆ ಎಸ್‌ಯವಿ ಕಾರುಗಳೇ ನೆಚ್ಚಿನ ಆಯ್ಕೆಗಳಾಗಿತ್ತು. ತೆರಿಗೆ ಉಳಿತಾಯದ ಪ್ರಯೋಜನಗಳೊಂದಿಗೆ ಉನ್ನತ ದರ್ಜೆಯ, ಉತ್ತಮ ಬ್ರ್ಯಾಂಡ್‌ನ ಹಾಗೂ ಪ್ರಿಮೀಯಮ್ ಕಾರುಗಳನ್ನು ಕೊಂಡವರೇ ಹೆಚ್ಚು ಎಂದು ವರದಿ ಹೇಳಿದೆ.
ಅದರಲ್ಲೂ ಎಲೆಕ್ಟ್ರಿಕ್ ಕಾರುಗಳನ್ನು ಹೆಚ್ಚಾಗಿ ಕೊಳ್ಳಲಾಗಿದೆ ಎಂದು SmyttenPulse AI ಸಂಸ್ಥೆ ವರದಿ ಕಂಡುಕೊಂಡಿದೆ.
ಮಧ್ಯಮ ವರ್ಗದವರು ಜಿಎಸ್‌ಟಿ ಪ್ರಯೋಜನಗಳನ್ನು ಉತ್ತಮ ಕಾರುಗಳನ್ನು ಪಡೆಯಲು ಬಳಸಿಕೊಂಡಿದ್ದಾರೆ ಎಂದು ಅದು ತಿಳಿಸಿದೆ.
ಶೇ 28 ರಷ್ಟಿದ್ದ ಕಾರುಗಳ ಮೇಲಿನ ಜಿಎಸ್‌ಟಿಯನ್ನು ಶೇ 18ಕ್ಕೆ ಇಳಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.