
ಪಿಟಿಐ
ನವದೆಹಲಿ: ವಾಹನ ತಯಾರಿಕಾ ಕಂಪನಿ ಹುಂಡೈ ಮೋಟರ್ ಇಂಡಿಯಾ (ಎಚ್‌ಎಂಐಎಲ್) ತನ್ನ ವಾಹನಗಳ ಬೆಲೆಯನ್ನು ಶೇ 0.6ರಷ್ಟು ಹೆಚ್ಚಳ ಮಾಡಿದೆ. ಪರಿಷ್ಕೃತ ದರವು ಜನವರಿ 1ರಿಂದ ಜಾರಿಗೆ ಬಂದಿದೆ.
ಪ್ರಮುಖ ಲೋಹಗಳು ಮತ್ತು ಸರಕುಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಇದೇ ದರ ಏರಿಕೆಗೆ ಕಾರಣ ಎಂದು ಕಂಪನಿಯು ಷೇರುಪೇಟೆಗೆ ಬುಧವಾರ ತಿಳಿಸಿದೆ.
ಕಂಪನಿಯು ಹ್ಯಾಚ್‌ಬ್ಯಾಕ್ ‘ಐ10 ನಿಯೋಸ್’, ವಿದ್ಯುತ್ ಚಾಲಿತ ಎಸ್‌ಯುವಿ ‘ಐಒಎನ್‌ಐಕ್ಯು 5’ ಸೇರಿದಂತೆ ಹಲವು ವಾಹನಗಳನ್ನು ಮಾರಾಟ ಮಾಡುತ್ತಿದೆ. ವಾಹನಗಳ ಬೆಲೆ ₹5.47 ಲಕ್ಷದಿಂದ ₹47 ಲಕ್ಷದವರೆಗೆ (ಎಕ್ಸ್ ಷೋರೂಂ ದರ) ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.