ADVERTISEMENT

Exter: ‘ಪಂಚ್‌’ಗೆ ಪೈಪೋಟಿ ನೀಡಲು ಹುಂಡೈ ‘ಎಕ್ಸ್‌ಟರ್‌’

ಇದರ ಪರಿಚಯಾತ್ಮಕ ಬೆಲೆಯು ₹5.99 ಲಕ್ಷದಿಂದ ಆರಂಭವಾಗುತ್ತದೆ.

ಪಿಟಿಐ
Published 10 ಜುಲೈ 2023, 19:43 IST
Last Updated 10 ಜುಲೈ 2023, 19:43 IST
‘ಎಕ್ಸ್‌ಟರ್‌’ ಮಾದರಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಹುಂಡೈ ಮೋಟರ್ ಇಂಡಿಯಾ ಕಂಪನಿಯ ಎಂ.ಡಿ. ಹಾಗೂ ಸಿಇಒ ಉನ್ಊ ಕಿಮ್‌, ಕಂಪನಿಯ ಸಿಒಒ ತರುಣ್ ಗರ್ಗ್ ಪಾಲ್ಗೊಂಡಿದ್ದರು. (ಪಿಟಿಐ ಚಿತ್ರ)
‘ಎಕ್ಸ್‌ಟರ್‌’ ಮಾದರಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಹುಂಡೈ ಮೋಟರ್ ಇಂಡಿಯಾ ಕಂಪನಿಯ ಎಂ.ಡಿ. ಹಾಗೂ ಸಿಇಒ ಉನ್ಊ ಕಿಮ್‌, ಕಂಪನಿಯ ಸಿಒಒ ತರುಣ್ ಗರ್ಗ್ ಪಾಲ್ಗೊಂಡಿದ್ದರು. (ಪಿಟಿಐ ಚಿತ್ರ)   

ನವದೆಹಲಿ: ಹುಂಡೈ ಮೋಟರ್ ಇಂಡಿಯಾ ಕಂಪನಿಯು ಆರಂಭಿಕ ಶ್ರೇಣಿಯ ಎಸ್‌ಯುವಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಕಂಪನಿಯು ಸೋಮವಾರ ‘ಎಕ್ಸ್‌ಟರ್‌’ ವಾಹನವನ್ನು ಬಿಡುಗಡೆ ಮಾಡಿದೆ. ಇದರ ಪರಿಚಯಾತ್ಮಕ ಬೆಲೆಯು ₹5.99 ಲಕ್ಷದಿಂದ ಆರಂಭವಾಗುತ್ತದೆ.

ಈ ಮಾದರಿಯು ಟಾಟಾ ಮೋಟರ್ಸ್‌ನ ‘ಪಂಚ್‌’ ಮಾದರಿಗೆ ಪೈಪೋಟಿ ನೀಡಲಿದೆ. ‘ಎಕ್ಸ್‌ಟರ್‌’ನಲ್ಲಿ 1.2 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಇದೆ. ಮ್ಯಾನುವಲ್‌ ಟ್ರಾನ್ಸ್‌ಮಿಷನ್ ಹಾಗೂ ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳಲ್ಲಿ ಇದು ಲಭ್ಯವಿದೆ.

ಮ್ಯಾನುವಲ್‌ ಟ್ರಾನ್ಸ್‌ಮಿಷನ್ ಮಾದರಿಯು ಲೀಟರ್‌ಗೆ 19.4 ಕಿ.ಮೀ., ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್ ಮಾದರಿಯು 19.2 ಕಿ.ಮೀ. ಇಂಧನ ದಕ್ಷತೆಯನ್ನು ನೀಡುತ್ತದೆ. ಸಿಎನ್‌ಜಿ ಮಾದರಿಯು ಪ್ರತಿ ಕೆ.ಜಿ.ಗೆ 27.1 ಕಿ.ಮೀ. ದಕ್ಷತೆಯನ್ನು ಹೊಂದಿದ್ದು, ಇದಕ್ಕೆ ₹8.23 ಲಕ್ಷ ಬೆಲೆ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.