ADVERTISEMENT

6 ಲಕ್ಷ ಸಿಎನ್‌ಜಿ ಕಾರ್‌ ಮಾರಾಟ: ಮಾರುತಿ ಗುರಿ

ಪಿಟಿಐ
Published 3 ಏಪ್ರಿಲ್ 2022, 13:40 IST
Last Updated 3 ಏಪ್ರಿಲ್ 2022, 13:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಬಿಡಿಭಾಗಗಳ ಪೂರೈಕೆ ಸ್ಥಿತಿ ಅವಲಂಬಿಸಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಗರಿಷ್ಠ 6 ಲಕ್ಷ ಸಿಎನ್‌ಜಿ ವಾಹನಗಳನ್ನು ಮಾರಾಟ ಮಾಡುವ ಗುರಿ ಹೊಂದಿರುವುದಾಗಿ ಮಾರುತಿ ಸುಜುಕಿ ಇಂಡಿಯಾ ಕಂಪನಿಯ ಹಿರಿಯ ಕಾರ್ಯನಿರ್ವಾಕ ನಿರ್ದೇಶಕ ಶಶಾಂಕ್‌ ಶ್ರೀವಾಸ್ತವ ಹೇಳಿದ್ದಾರೆ.

2021–22ನೇ ಹಣಕಾಸು ವರ್ಷದಲ್ಲಿ 2.3 ಲಕ್ಷ ಸಿಎನ್‌ಜಿ ವಾಹನ ಮಾರಾಟ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ವಾಹನ ಮಾದರಿಗಳಲ್ಲಿ ಸಿಎನ್‌ಜಿ ಅಳವಡಿಸುವ ಯೋಜನೆಯನ್ನು ಕಂಪನಿ ಹೊಂದಿದೆ.

ಪೆಟ್ರೋಲ್ ಬೆಲೆ ಹೆಚ್ಚಾಗುತ್ತಿರುವ ಕಾರಣದಿಂದ ಗ್ರಾಹಕರು ಸಿಎನ್‌ಜಿ ಕಾರುಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.