ADVERTISEMENT

ಮಿನಿ, ಮೈಕ್ರೊ ಎಸ್‌ಯುವಿ ಅಬ್ಬರ

ಇ.ಎಸ್.ಸುಧೀಂದ್ರ ಪ್ರಸಾದ್
Published 18 ಡಿಸೆಂಬರ್ 2019, 19:31 IST
Last Updated 18 ಡಿಸೆಂಬರ್ 2019, 19:31 IST
ಕ್ವಿಡ್‌
ಕ್ವಿಡ್‌   

ಸ ಣ್ಣ ಕಾರುಗಳ ಸ್ವರ್ಗ ಎಂದೇ ಪ್ರಖ್ಯಾತಿ ಪಡೆದಿದ್ದ ಭಾರತದಲ್ಲಿನ ಗ್ರಾಹಕರ ಅಪೇಕ್ಷೆಗಳು ವರ್ಷಗಳು ಉರುಳಿದಂತೆ ಬದಲಾಗಿವೆ.ಕಳೆದ ಕೆಲ ತಿಂಗಳ ಮಾರುಕಟ್ಟೆ ಬೇಡಿಕೆ,ಮಾರಾಟವನ್ನು ಗಮನಿಸಿದರೆ ಗ್ರಾಹಕರ ಕಾರಿನ ಬೇಡಿಕೆ ಮಿನಿ ಎಸ್‌ಯುವಿಗಳತ್ತ ನೆಟ್ಟಿರುವುದು ಸ್ಪಷ್ಟ.ಕಡಿಮೆ ದರದ ಕಾರು ಖರೀದಿದಾರರೂ ಮೈಕ್ರೊ ಎಸ್‌ಯುವಿಗಳತ್ತಲೂ ಮುಖ ಮಾಡಿರುವುದು ದಾಖಲೆಗಳೇ ಹೇಳುತ್ತವೆ.

ಕಳೆದ ಎರಡು ದಶಕಗಳ ಕಾಲ ವಾಹನ ಕ್ಷೇತ್ರವನ್ನು ಆಳಿದ ಸಣ್ಣ ಕಾರುಗಳು ಈಗ ನಿಧಾನಕ್ಕೆ ಮರೆಗೆ ಸರಿಯುತ್ತಿವೆ.ದ್ವಿಚಕ್ರ ವಾಹನಗಳಿಂದ ಕಾರುಗಳಿಗೆ ಬಡ್ತಿ ಹೊಂದಿದ ಕುಟುಂಬಗಳು ಈಗ ಆಧುನಿಕ,ವಿಲಾಸಿ,ಹೆಚ್ಚು ಸ್ಥಳಾವಕಾಶ ಇರುವ ಹಾಗೂ ಸುರಕ್ಷಿತ ಸ್ಪೋರ್ಟ್ಸ್‌ ಯುಟಿಲಿಟಿ ವಾಹನವನ್ನು ಬಯಸುತ್ತಿವೆ.ಗ್ರಾಹಕರ ಈ ಬೇಡಿಕೆ ಪೂರೈಸಲು ಕಾರು ತಯಾರಿಕಾ ಕಂಪನಿಗಳು ಈಗ ಪೈಪೋಟಿಗೆ ಬಿದ್ದಿವೆ.

ದಶಕದ ಹಿಂದೆ ಶೇ60ರಿಂದ70ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದ ಸಣ್ಣ ಕಾರುಗಳ ಜಾಗವನ್ನು ಈಗ ಮಿನಿ ಎಸ್‌ಯುವಿಗಳು ನಿಧಾನವಾಗಿ ಆಕ್ರಮಿಸುತ್ತಿವೆ.ಕಿಯಾ ಸೆಲ್ಟೋಸ್, ಹುಂಡೈ ವೆನ್ಯೂ,ಎಂಜಿ ಹೆಕ್ಟರ್‌ ಹಾಗೂ ಮಾರುತಿ ಸುಜುಕಿ ಎಕ್ಸ್‌ಎಲ್‌6,ಟಾಟಾ ಹ್ಯಾರಿಯರ್ ಇತ್ಯಾದಿ ಕಾರುಗಳು ದಾಂಗುಡಿ ಇಡುತ್ತಿದ್ದಂತೆ ಸಣ್ಣ ಕಾರುಗಳ ಮಾರುಕಟ್ಟೆ ಪಾಲು ಶೇ40ಕ್ಕೆ ಕುಸಿದರೆ,ಮಿನಿ ಎಸ್‌ಯುವಿ ಶೇ38ಕ್ಕೆ ಏರಿಕೆಯಾಗಿದೆ.

ADVERTISEMENT

ಪ್ರದೇಶಕ್ಕೆ ಅನುಗುಣವಾಗಿ ಮಾರಾಟ

ದೊಡ್ಡ ನಗರ ಹಾಗೂ ಸಣ್ಣ ಪಟ್ಟಣಗಳ ಗ್ರಾಹಕರ ಅಪೇಕ್ಷೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ,ಸಣ್ಣ ನಗರಗಳಲ್ಲಿ ಸಣ್ಣ ಕಾರುಗಳ ಮಾರಾಟವೇ ಜೋರಾಗಿದೆ.ಆದರೆ ದೊಡ್ಡ ನಗರಗಳಲ್ಲಿನ ಮಿನಿ ಎಸ್‌ಯುವಿಗಳು ಖರೀದಿದಾರರ ಆರಂಭಿಕ ಹಂತದ ಕಾರುಗಳಾಗಿವೆ.ಗ್ರಾಹಕರ ಈ ಹೊಸ ಬೇಡಿಕೆಯಿಂದಾಗಿ ತೀವ್ರ ನಷ್ಟ ಅನುಭವಿಸುತ್ತಿದ್ದ ಕಾರು ತಯಾರಿಕಾ ಕಂಪನಿಗಳು4ಮೀ.ಉದ್ದದ ಮಿನಿ ಎಸ್‌ಯುವಿ ಮೂಲಕ ಚೇತರಿಕೆಯ ನಿರೀಕ್ಷೆಯಲ್ಲಿವೆ.ಈ ಗಾತ್ರದ ಕಾರುಗಳಿಗೆ ಇರುವ ಕಡಿಮೆ ತೆರಿಗೆಯನ್ನೇ ಅವಕಾಶವನ್ನಾಗಿಸಿಕೊಂಡಿವೆ.

ಹೀಗಾಗಿ ಕಳೆದ ನಾಲ್ಕು ವರ್ಷಗಳಿಂದ ಹಂತಹಂತವಾಗಿ ಕುಸಿದಿದ್ದ ಕಾರುಗಳ ಮಾರಾಟವು ಇವುಗಳ ಮೂಲಕ ಹೆಚ್ಚಳವಾಗಿರುವುದನ್ನು ಸಿಎಲ್‌ಎಸ್‌ಎ ಎಂಬ ಸಮೀಕ್ಷಾ ತಂಡವು ನೀಡಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬರಲಿವೆ ಇನ್ನಷ್ಟು ಮಿನಿ ಎಸ್‌ಯುವಿ

ಮುಂದಿನ ಕೆಲ ವರ್ಷಗಳ ಕಾಲ ಮಿನಿ ಎಸ್‌ಯುವಿಗಳೇ ಕಾರುಗಳ ಕ್ಷೇತ್ರವನ್ನು ಆಳಲಿವೆ.ಹೀಗಾಗಿ ಒಂದು ಅಂದಾಜಿನ ಪ್ರಕಾರ 20ಕ್ಕೂ ಅಧಿಕ ಎಸ್‌ಯುವಿಗಳು ರಸ್ತೆಗಿಳಿಯಲಿವೆ.ಇದರಲ್ಲಿ ಪ್ರಮುಖವಾಗಿ ಬ್ರಿಟಿಷ್–ಚೀನಾದ ಎಂಜಿ ಮೋಟರ್ಸ್‌,ಕೊರಿಯಾದ ಕಿಯಾ ಮೋಟರ್ಸ್ ಕಂಪನಿ ನಾಲ್ಕು ಹೊಸ ಮಾದರಿಯ ಎಸ್‌ಯುವಿಗಳನ್ನು ಪರಿಚಯಿಸಲಿವೆ.

ಮಹೀಂದ್ರಾ,ಮಾರುತಿ ಸುಜುಕಿ,ಟಾಟಾ ಮೋಟರ್ಸ್ ಮತ್ತು ಹುಂಡೈ ಮೋಟರ್ ಕಂಪನಿಗಳೂ ಇಂಥ ಹೊಸ ಮಾದರಿ ಮೂಲಕ ಪೈಪೋಟಿಗೆ ಸಿದ್ಧವಾಗಿವೆ.ಸ್ಕೊಡಾ ಕೂಡಾ ತನ್ನ ಕಿಯಾಕ್ ಮಾದರಿಯಲ್ಲಿ ಹೊಸ ಕಾರು ಪರಿಚಯಿಸುವುದಾಗಿ ಘೋಷಿಸಿದೆ.

ಮತ್ತೊಂದೆಡೆ ಟಾಟಾ ಹ್ಯಾರಿಯರ್ ಪ್ಲಾಟ್‌ಫಾರ್ಮ್‌ನಲ್ಲಿ ಅಗ್ಗದ ದರದ ರೇಂಜ್ ರೋವರ್‌ ಕೂಡಾ ಅಭಿವೃದ್ಧಿಗೊಳಿಸುವ ಇಂಗಿತವನ್ನು ಕಂಪನಿ ವ್ಯಕ್ತಪಡಿಸಿದ್ದು,ಇದು
2022ಕ್ಕೆ ಬರುವ ಸಾಧ್ಯತೆ ಇದೆ.ಜೀಪ್ ಕೂಡಾ ಇನ್ನೂ ಹಲವು ಮಾದರಿಗಳನ್ನು ಶೀಘ್ರದಲ್ಲಿ ಭಾರತದ ರಸ್ತೆಗಿಳಿಸಲು ಸಿದ್ಧತೆ ಮಾಡಿಕೊಂಡಿರುವ ಸುದ್ದಿಗಳು
ಹರಿದಾಡುತ್ತಿವೆ.

ಎರಡು ವರ್ಷಗಳಲ್ಲಿ ಗ್ರಾಹಕರ ಬಯಕೆ ಬದಲಾಗಿದೆ.ಹೀಗಾಗಿ ಐದು ವರ್ಷಗಳ ಮಾರಾಟ ಪ್ರಗತಿಯಲ್ಲಿ ಯುಟಿಲಿಟಿ ವಾಹನಗಳ ಮಾರಾಟ ಪ್ರಮಾಣ ಶೇ31ರಿಂದ32ರಷ್ಟು ಹೆಚ್ಚಾಗಿದೆ.ಹಾಗೆಯೇ ಮುಂದಿನ ಐದು ವರ್ಷಗಳಲ್ಲಿ ಹ್ಯಾಚ್‌ಬ್ಯಾಕ್‌ ಕಾರುಗಳ ಮಾರುಕಟ್ಟೆ ಪಾಲು ಶೇ30ರಿಂದ35ರಷ್ಟು ಕುಸಿಯುವ ಸಾಧ್ಯತೆಯೂ ಇದೆ ಎಂದು ಮಾರುಕಟ್ಟೆ ಪಂಡಿತರು ಹೇಳುತ್ತಾರೆ.

ಈ ನಡುವೆ ಮೈಕ್ರೊ ಎಸ್‌ಯುವಿಗಳೂ ರಸ್ತೆಗಿಳಿದಿವೆ. ₹5ರಿಂದ7ಲಕ್ಷ ಬೆಲೆಯ ಮೈಕ್ರೊ ಎಸ್‌ಯುವಿಗಳನ್ನು ರಿನೊ ಮತ್ತು ಮಾರುತಿ ರಸ್ತೆಗಿಳಿಸಿವೆ.ಕ್ವಿಡ್ ಹಾಗೂ ಎಸ್‌ಪ್ರೆಸೊ ಕಾರುಗಳತ್ತಲೂ ಕೆಲ ಗ್ರಾಹಕರು ಆಕರ್ಷಿತರಾಗುತ್ತಿದ್ದಾರೆ.ಹೀಗಾಗಿ ಈ ಮಾದರಿಯ ಕಾರುಗಳನ್ನು ಅಭಿವೃದ್ಧಿಪಡಿಸುವತ್ತ ಹುಂಡೈ,ಟಾಟಾ ಮೋಟರ್ಸ್, ನಿಸಾನ್ ಕಂಪನಿಗಳು ಸಜ್ಜಾಗಿವೆ.

ಹೊಸ ಅವತಾರದೊಂದಿಗೆ ಕಾರುಗಳ ಸಂಖ್ಯೆಯೂ ಹೆಚ್ಚಳವಾಗುತ್ತಲೇ ಸಾಗಿದೆ.ವಾತಾವರಣದ ಮೇಲಿನ ಒತ್ತಡವೂ ಹೆಚ್ಚಾಗಿದೆ.ಹೀಗಿದ್ದರೂ ಡೀಸೆಲ್‌ ಮತ್ತು ಪೆಟ್ರೋಲ್‌ ಮಾದರಿಯ ಎಸ್‌ಯುವಿಗಳ ನಡುವಣ
ವ್ಯತ್ಯಾಸ 90:10ಅನುಪಾತದಷ್ಟಿದೆ ಎಂದು ಅಂಕಿ ಅಂಶಗಳು ಹೇಳುತ್ತವೆ.ಹೀಗಿದ್ದರೂ ಈವರೆಗೂ ಎಲೆಕ್ಟ್ರಿಕ್
ಕಾರುಗಳು ದ್ವಿಚಕ್ರ ವಾಹನಗಳಂತೆ ಅಬ್ಬರಿಸುತ್ತಿಲ್ಲ ಎಂಬುದೂ ಅಷ್ಟೇ ಸತ್ಯ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.