ADVERTISEMENT

ಓಲಾ ಎಲೆಕ್ಟ್ರಿಕ್‌: ಮಾರುಕಟ್ಟೆಯಲ್ಲಿ ಮುಂಚೂಣಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2025, 13:57 IST
Last Updated 7 ಫೆಬ್ರುವರಿ 2025, 13:57 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ವಿದ್ಯುತ್‌ಚಾಲಿತ ದ್ವಿಚಕ್ರವಾಹನ ತಯಾರಿಕಾ ಕಂಪನಿ ಓಲಾ ಎಲೆಕ್ಟ್ರಿಕ್‌, 2024–25ನೇ ಆರ್ಥಿಕ ವರ್ಷದ ಡಿಸೆಂಬರ್‌ ತ್ರೈಮಾಸಿಕದಲ್ಲಿ ₹1,069 ಕೋಟಿ ವರಮಾನ ಗಳಿಸಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹1,336 ಕೋಟಿ ಗಳಿಸಲಾಗಿತ್ತು ಎಂದು ಕಂಪನಿ ತಿಳಿಸಿದೆ.

ಮೂರನೇ ತ್ರೈಮಾಸಿಕದಲ್ಲಿಯೂ ಮಾರುಕಟ್ಟೆಯಲ್ಲಿ ಕಂಪನಿಯ ಪ್ರಾಬಲ್ಯ ಮುಂದುವರಿದಿದೆ. ವಾಹನ್‌ ವರದಿ ಪ್ರಕಾರ ಡಿಸೆಂಬರ್‌ ತ್ರೈಮಾಸಿಕದಲ್ಲಿ ಶೇ 25.5ರಷ್ಟು ಪಾಲು ಹೊಂದಿದ್ದು, ಅಗ್ರಸ್ಥಾನ ಕಾಯ್ದುಕೊಂಡಿದೆ. ಉತ್ಪಾದನೆ ಮತ್ತು ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಮುಂಚೂಣಿ ಸ್ಥಾನದಲ್ಲಿದೆ ಎಂದು ತಿಳಿಸಿದೆ.

ಜೆನ್‌3 ಎಸ್‌1 ಸ್ಕೂಟರ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಇದೇ ತಿಂಗಳ ಎರಡನೇ ವಾರದಿಂದ ಗ್ರಾಹಕರ ಖರೀದಿಗೆ ಲಭ್ಯವಿದೆ ಎಂದು ಹೇಳಿದೆ.

ADVERTISEMENT

ರೋಡ್‌ಸ್ಟಾರ್‌ ಎಕ್ಸ್‌ ಮತ್ತು ರೋಡ್‌ಸ್ಟಾರ್‌ ಎಕ್ಸ್‌ ಪ್ಲಸ್‌ ಬಿಡುಗಡೆ ಮೂಲಕ ಮೋಟರ್‌ ಸೈಕಲ್‌ ವಿಭಾಗಕ್ಕೂ ಓಲಾ ಪ್ರವೇಶಿಸಿದೆ. ಇದೇ 25ರಿಂದ ಈ ದ್ವಿಚಕ್ರವಾಹನಗಳ ಮಾರಾಟ ಆರಂಭವಾಗಲಿದೆ ಎಂದು ವಿವರಿಸಿದೆ.

ಡಿಸೆಂಬರ್‌ ತ್ರೈಮಾಸಿಕದಲ್ಲಿ ಒಟ್ಟು 84,029 ದ್ವಿಚಕ್ರವಾಹನಗಳನ್ನು ಗ್ರಾಹಕರಿಗೆ ವಿತರಿಸಿದೆ. ಹಾಲಿ ಇರುವ ಮಳಿಗೆಗಳು ಸೇರಿದಂತೆ ದೇಶದಾದ್ಯಂತ ಮಾರಾಟ ಸೇವೆಯನ್ನು 4 ಸಾವಿರಕ್ಕೂ ಹೆಚ್ಚು ಮಳಿಗೆಗಳಿಗೆ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.