ADVERTISEMENT

ಪ್ರಯಾಣಿಕ ವಾಹನ ರಿಟೇಲ್‌ ಮಾರಾಟ ಇಳಿಕೆ

ಪಿಟಿಐ
Published 9 ಸೆಪ್ಟೆಂಬರ್ 2020, 17:44 IST
Last Updated 9 ಸೆಪ್ಟೆಂಬರ್ 2020, 17:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪ್ರಯಾಣಿಕ ವಾಹನಗಳ ರಿಟೇಲ್‌ ಮಾರಾಟ ಆಗಸ್ಟ್‌ನಲ್ಲಿ ಶೇಕಡ 7ರಷ್ಟು ಇಳಿಕೆಯಾಗಿದೆ ಎಂದು ವಾಹನ ವಿತರಕರ ಸಂಘಗಳ ಒಕ್ಕೂಟ (ಎಫ್‌ಎಡಿಎ) ತಿಳಿಸಿದೆ.

2019ರ ಆಗಸ್ಟ್‌ನಲ್ಲಿ 1.92 ಲಕ್ಷ ವಾಹನಗಳು ಮಾರಾಟವಾಗಿದ್ದವು. 2020ರ ಆಗಸ್ಟ್‌ನಲ್ಲಿ 1.78 ಲಕ್ಷ ವಾಹನಗಳು ಮಾತ್ರ ಮಾರಾಟವಾಗಿವೆ ಎಂದು ಒಕ್ಕೂಟ ಹೇಳಿದೆ. ಸ್ಥಳೀಯ ಆರ್‌ಟಿಒಗಳಿಂದ ಮಾಹಿತಿ ಪಡೆದು ಅದು ಈ ಅಂಕಿ–ಅಂಶ ನೀಡಿದೆ.

ದ್ವಿಚಕ್ರ ವಾಹನಗಳ ಮಾರಾಟ ಶೇ 29ರಷ್ಟು ಇಳಿಕೆಯಾಗಿದ್ದರೆ, ತ್ರಿಚಕ್ರ ವಾಹನ ಮಾರಾಟ ಶೇ 69.51ರಷ್ಟು ಕುಸಿದಿದೆ. ವಾಣಿಜ್ಯ ವಾಹನಗಳ ಮಾರಾಟ ಶೇ 57ರಷ್ಟು ಕಡಿಮೆಯಾಗಿದೆ. ಎಲ್ಲಾ ಮಾದರಿಗಳನ್ನೂ ಒಳಗೊಂಡು ಒಟ್ಟಾರೆ ಮಾರಾಟವು ಶೇ 26.81ರಷ್ಟು ಇಳಿಕೆಯಾಗಿದೆ.

ADVERTISEMENT

‘ಹಬ್ಬದ ಅವಧಿಗಳ ಆರಂಭ ಹಾಗೂ ಆರ್ಥಿಕ ಚಟುವಟಿಕೆಗಳ ಅನ್‌ಲಾಕ್‌ ಪ್ರಕ್ರಿಯೆಯಿಂದಾಗಿ ಜುಲೈಗೆ ಹೋಲಿಸಿದರೆ ಆಗಸ್ಟ್‌ನಲ್ಲಿನ ಮಾರಾಟವು ತುಸು ಚೇತರಿಸಿಕೊಂಡಿದೆ’ ಎಂದು ಒಕ್ಕೂಟದ ಅಧ್ಯಕ್ಷ ವೆಂಕಟೇಶ್‌ ಗುಲಾಟಿ ತಿಳಿಸಿದ್ದಾರೆ.

ವೈಯಕ್ತಿಕ ಬಳಕೆಯ ವಾಹನಗಳಿಗೆ ಆದ್ಯತೆ ನೀಡುತ್ತಿರುವುದರಿಂದ ಎಂಟ್ರಿ ಲೆವೆಲ್‌ನ ಕಾರುಗಳಿಗೆ ಹೆಚ್ಚಿನ ಬೇಡಿಕೆ ಇದೆ.

ವಾಣಿಜ್ಯ ವಾಹನಗಳಿಗೆ ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಪೂರ್ಣ ಪ್ರಮಾಣದಲ್ಲಿ ನೆರವು ನೀಡಲು ಮುಂದಾಗಿಲ್ಲ. ಹೀಗಾಗಿ ಬೇಡಿಕೆಯು ಕೋವಿಡ್‌ಗೂ ಮುಂಚಿನ ಸ್ಥಿತಿಗೆ ಬರಲು ಸಾಧ್ಯವಾಗಿಲ್ಲ.

‘ಬೇಡಿಕೆ ಸೃಷ್ಟಿಸುವಂತಹ ಉತ್ತೇಜಕ ಕ್ರಮಗಳನ್ನು ಘೋಷಿಸುವಂತೆ ಹಾಗೂ ದ್ವಿಚಕ್ರ ವಾಹನಗಳ ಜಿಎಸ್‌ಟಿ ತಗ್ಗಿಸುವಂತೆ ಒಕ್ಕೂಟವು ಮತ್ತೊಮ್ಮೆ ಸರ್ಕಾರಕ್ಕೆ ಮನವಿ ಮಾಡುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.