ADVERTISEMENT

ಬೆಂಗಳೂರು ಮಾರುಕಟ್ಟೆಗೆ ಟಾಟಾ ‘ಆಲ್ಟ್ರೋಝ್’

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 23:30 IST
Last Updated 24 ಜನವರಿ 2020, 23:30 IST
ಟಾಟಾ ಮೋಟರ್ಸ್‌ನ ಜನರಲ್ ಮ್ಯಾನೇಜರ್ ಜಯದೀಪ್ ಹಾಗೂ ವಿವೇಕ್ ಶ್ರೀವತ್ಸ ಅವರು ಕಾರ್‌ ಪರಿಚಯಿಸಿದರು
ಟಾಟಾ ಮೋಟರ್ಸ್‌ನ ಜನರಲ್ ಮ್ಯಾನೇಜರ್ ಜಯದೀಪ್ ಹಾಗೂ ವಿವೇಕ್ ಶ್ರೀವತ್ಸ ಅವರು ಕಾರ್‌ ಪರಿಚಯಿಸಿದರು   

ಬೆಂಗಳೂರು: ಹಲವು ಸುರಕ್ಷತಾ ಕ್ರಮಗಳನ್ನು ಅಳವಡಿಸಿರುವ ಟಾಟಾ ಆಲ್ಟ್ರೋಝ್‌ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರ್‌ ಅನ್ನು ಟಾಟಾ ಮೋಟರ್ಸ್ ಸಂಸ್ಥೆ ಗುರುವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪರಿಚಯಿಸಿತು.

ಆಲ್ಫಾ ಅರ್ಟಿಟೆಕ್ಚರ್ ವಿನ್ಯಾಸ ಹಾಗೂ ಇಂಪ್ಯಾಕ್ಟ್ 2.0 ತಂತ್ರಜ್ಞಾನವನ್ನು ಈ ಕಾರ್‌ ಒಳಗೊಂಡಿದೆ.

'ಎಲ್ಲ ಬಗೆಯ ಗ್ರಾಹಕರ ಅಭಿರುಚಿ ತಣಿಸುವಂತಹ ಕಾರ್‌ ಇದು. ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಸೇರಿದಂತೆ, ಒಟ್ಟು 10 ಮಾದರಿಗಳಲ್ಲಿ ಈ ವಾಹನ ಲಭ್ಯವಿದೆ. ಗ್ರಾಹಕರು ತಮ್ಮ ಅನುಕೂಲ ಹಾಗೂ ಅಭಿರುಚಿಗೆ ತಕ್ಕಂತಹ ಮಾದರಿಯನ್ನು ಆಯ್ಕೆಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ' ಎಂದು ಸಂಸ್ಥೆಯ ಪ್ರಯಾಣಿಕ ವಾಹನ ಮಾರಾಟ ವಿಭಾಗದ ಮುಖ್ಯಸ್ಥ ವಿವೇಕ್ ಶ್ರೀವತ್ಸ ಹೇಳಿದರು.

ADVERTISEMENT

'ಬಳಕೆಗೆ ಅನುಕೂಲವಾಗುವಂತೆ ಹಲವು ಸೌಕರ್ಯಗಳನ್ನು ಅಳವಡಿಸಲಾಗಿದೆ. ಬಾಗಿಲುಗಳನ್ನು 90 ಡಿಗ್ರಿಗಳವರೆಗೆ ತೆರೆಯಬಹುದಾದ ವ್ಯವಸ್ಥೆ ಮಾಡಲಾಗಿದೆ. ಇದರ ಜತೆಗೆ ಸುಧಾರಿತ ತಂತ್ರಜ್ಞಾನ ಹಾಗೂ ಹಲವು ಸೌಕರ್ಯಗಳನ್ನು ಅಳವಡಿಸಿ ಟಿಯಾಗೊ, ಟಿಗೊರ್ ಹಾಗೂ ನೆಕ್ಸಾನ್ ವಾಹನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇವುಗಳಲ್ಲಿ ಇಂಗ್ಲಿಷ್‌, ಹಿಂದಿ ಮತ್ತು ಕನ್ನಡವೂ ಸೇರಿದಂತೆ ಒಟ್ಟು 9 ಭಾಷೆಗಳಲ್ಲಿ ನಿರ್ವಹಣೆ ಮಾಡಬಹುದಾದ 'ಐರಾ' ತಂತ್ರಜ್ಞಾನ ಅಳವಡಿಸಿದ್ದೇವೆ.‌ ಪ್ರಸ್ತುತ ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ಮಾತ್ರ ಈ ಸೌಲಭ್ಯವಿದ್ದು, ಮುಂದಿನ ದಿನಗಳಲ್ಲಿ ಇತರೆ ಭಾಷೆಗಳಲ್ಲೂ ಸೌಲಭ್ಯ ಸಿಗಲಿದೆ' ಎಂದರು. ಎಕ್ಸ್‌ಷೋರೂಂ ಬೆಲೆ ₹ 5.29 ಲಕ್ಷದಿಂದ ₹ 6.9ಲಕ್ಷದವರೆಗೆ ಇದೆ.

ವೈಶಿಷ್ಟ್ಯಗಳು

ಪೂರ್ಣ ಪ್ರಮಾಣದ ಬಿಎಸ್‌6 ಮಾದರಿಯ ಡೀಸೆಲ್ ಎಂಜಿನ್

ಸುಲಭ ಕಾರ್ಯನಿರ್ವಹಣೆಗೆ ಧ್ವನಿ ಆಧಾರಿತ ತಂತ್ರಜ್ಞಾನ

ಕ್ರೂಯಿಸ್ ಕಂಟ್ರೋಲ್ ವ್ಯವಸ್ಥೆ

ಐವರು ಕುಳಿತುಕೊಂಡು ಪ್ರಯಾಣಿಸಬಹುದಾದ ವಿಶಾಲ ಆಸನಗಳು.

ವಿವಿಧ ಡ್ರೈವ್ ಮೋಡ್‌ಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.