ADVERTISEMENT

ಟಾಟಾ ಕಾರುಗಳ ಮೇಲೆ ₹ 1.50 ಲಕ್ಷದವರೆಗೂ ಭಾರೀ ರಿಯಾಯಿತಿ 

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2019, 11:05 IST
Last Updated 15 ಸೆಪ್ಟೆಂಬರ್ 2019, 11:05 IST
ಟಾಟಾ ಹ್ಯಾರಿಯರ್ ಕಾರು
ಟಾಟಾ ಹ್ಯಾರಿಯರ್ ಕಾರು   

ನವದೆಹಲಿ:ಆರ್ಥಿಕ ಹಿಂಜರಿತದ ಪರಿಣಾಮಆಟೊಮೊಬೈಲ್ ಕ್ಷೇತ್ರ ತೀವ್ರ ಸಂಕಷ್ಟಎದುರಿಸುತ್ತಿದ್ದು ಕಾರು ತಯಾರಿಕ ಕಂಪೆನಿಗಳು ವಾಹನಗಳ ಮಾರಾಟಕ್ಕಾಗಿ ಗ್ರಾಹಕರನ್ನು ಸೆಳೆಯುವ ಸಲುವಾಗಿ ಕಾರುಗಳ ಬೆಲೆಯಲ್ಲಿ ರಿಯಾಯಿತಿ ಪ್ರಕಟಿಸಿವೆ. ಇದೀಗಟಾಟಾ ಮೋಟಾರ್ಸ್ ದಸರಾ ಮತ್ತು ದೀಪಾವಳಿ ಹಬ್ಬಗಳನ್ನು ಗಮನದಲ್ಲಿಸಿಕೊಂಡುಭಾರೀ ರಿಯಾಯಿತಿ ಘೋಷಣೆ ಮಾಡಿದೆ.

ಟಾಟಾ ಹೆಕ್ಸಾ,ಟಿಯಾಗೊ,ಟಿಯಾಗೊ ಎನ್‌ಆರ್‌ಜಿ, ಟೈಗೊರ್, ನೆಕ್ಸಾನ್, ಹ್ಯಾರಿಯರ್ ಕಾರುಗಳ ಮೇಲೆಭಾರೀ ಪ್ರಮಾಣದ ರಿಯಾಯಿತಿಯನ್ನುಟಾಟಾ ಮೋಟಾರ್ಸ್ ಪ್ರಕಟಿಸಿದೆ.

ಟಾಟಾ ಹೆಕ್ಸಾ ಕಾರಿನ ಮೇಲೆ ₹ 1.50 ಲಕ್ಷ,ನೆಕ್ಸಾನ್ ಕಾರಿನ ಮೇಲೆ₹ 85,000, ಸಣ್ಣ ಕಾರುಟಿಯಾಗೊ ಮತ್ತುಯಾಗೊ ಎನ್‌ಆರ್‌ಜಿ ಮೇಲೆ₹ 70,000,ಟೈಗೊರ್ ಕಾರಿನ ಮೇಲೆ₹ 1.15 ಲಕ್ಷ ಹಾಗೂ ಜನಪ್ರಿಯ ಹ್ಯಾರಿಯರ್ ಕಾರಿನ ಮೇಲೆ ₹ 50,000 ರಿಯಾಯಿತಿಯನ್ನು ಘೋಷಣೆ ಮಾಡಲಾಗಿದೆ.

ದಸರಾ ಮತ್ತು ದೀಪಾವಳಿ ಹಬ್ಬಗಳಿಗಾಗಿ ಈ ರಿಯಾಯಿತಿ ಉಡುಗೊರೆ ನೀಡಲಾಗುತ್ತಿದೆ ಎಂದು ಟಾಟಾ ಮೋಟರ್ಸ್‌ನ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಎಸ್‌.ಎನ್‌.ಬರ್ಮನ್‌ ಹೇಳಿದ್ದಾರೆ.

ಈ ಹಿಂದೆ ಓಣಂ ಹಾಗೂ ಗಣೇಶ ಚತುರ್ಥಿಗೆ ರಿಯಾಯಿತಿಯನ್ನು ನೀಡಲಾಗಿತ್ತು. ಇದಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ದಸರಾ, ದೀಪಾವಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಿಯಾಯಿತಿಯನ್ನು ಪ್ರಕಟಿಸಲಾಗಿದ್ದು ಗ್ರಾಹಕರು ಸ್ಪಂದಿಸುವ ನಿರೀಕ್ಷೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಂಪನಿಯು ಕೆಲವು ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‌ಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದು ಬ್ಯಾಂಕ್‌ಗಳಿಂದ ಶೇ 100 ರಷ್ಟು ಸಾಲ ಸೌಲಭ್ಯ ದೊರಕಿಸಿಕೊಡುವ ಯೋಜನೆಗೂ ಚಾಲನೆ ನೀಡಲಾಗಿದೆ ಎಂದುಎಸ್‌.ಎನ್‌.ಬರ್ಮನ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.