ನವದೆಹಲಿ: ದೇಶದ ವಾಹನ ತಯಾರಿಕಾ ಕಂಪನಿ ಟಾಟಾ ಮೋಟರ್ಸ್ ಸೆಪ್ಟೆಂಬರ್ 22ರಿಂದ ಜಾರಿಗೆ ಬರುವಂತೆ ತನ್ನ ಪ್ರಯಾಣಿಕ ವಾಹನಗಳ ಬೆಲೆಯನ್ನು ಕಡಿತಗೊಳಿಸಿದೆ.
ಟಿಯಾಗೊ ಕಾರಿನ ಬೆಲೆಯನ್ನು ₹75 ಸಾವಿರ ಕಡಿಮೆ ಮಾಡಿದೆ. ಟಿಗಾರ್ (₹80 ಸಾವಿರ), ಆಲ್ಟ್ರೋಜ್ (₹1.10 ಲಕ್ಷ), ಪಂಚ್ (₹85 ಸಾವಿರ), ನೆಕ್ಸಾನ್ (₹1.55 ಲಕ್ಷ), ಹ್ಯಾರಿಯರ್ ₹1.4 ಲಕ್ಷ ಮತ್ತು ಸಫಾರಿ ದರ ₹1.45 ಲಕ್ಷದವರೆಗೆ ಕಡಿಮೆ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.
ಜಿಎಸ್‌ಟಿ ಕಡಿತದ ಪೂರ್ಣ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲಾಗುವುದು ಎಂದು ಟಾಟಾ ಮೋಟರ್ಸ್ ತಿಳಿಸಿದೆ.