ನವದೆಹಲಿ: ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿ ಟಾಟಾ ಮೋಟರ್ಸ್, ವಿದ್ಯುತ್ ಚಾಲಿತ ‘ಹ್ಯಾರಿಯರ್ ಇ.ವಿ’ ಕಾರನ್ನು ಮಂಗಳವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಈ ಎಸ್‌ಯುವಿ ವಾಹನದ ಆರಂಭಿಕ ಎಕ್ಸ್ ಷೋರೂಂ ಬೆಲೆ ₹21.49 ಲಕ್ಷ. ಜುಲೈ 2ರಿಂದ ಕಾರುಗಳ ಬುಕಿಂಗ್ ಶುರುವಾಗಲಿದೆ. ಒಮ್ಮೆ ಚಾರ್ಚ್ ಮಾಡಿದರೆ 500 ಕಿ.ಮೀ. ಪ್ರಯಾಣಿಸಬಹುದಾಗಿದ್ದು, ತ್ವರಿತವಾಗಿ ಚಾರ್ಜ್ ಆಗಲಿದೆ.
ಈ ಕಾರಿನಲ್ಲಿ 75 ಕೆಡಬ್ಲ್ಯುಎಚ್ ಸೇರಿ ಎರಡು ಬ್ಯಾಟರಿ ಆಯ್ಕೆಗಳಿವೆ. ಈ ಬ್ಯಾಟರಿಗಳಿಗೆ ಜೀವಿತಾವಧಿ ಗ್ಯಾರಂಟಿ ಇದೆ. ಸ್ವಯಂಚಾಲಿತ ಪಾರ್ಕಿಂಗ್ ವ್ಯವಸ್ಥೆ ಸೇರಿ 55ಕ್ಕೂ ಹೆಚ್ಚು ವೈಶಿಷ್ಠ್ಯಗಳಿವೆ ಎಂದು ಟಾಟಾ ಮೋಟರ್ಸ್ ಪ್ಯಾಸೆಂಜರ್ ವೆಹಿಕಲ್ ಲಿಮಿಟೆಡ್ ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.