ADVERTISEMENT

ಟಾಟಾ ಮೊಟರ್ಸ್:‌ ಮಾರಾಟ ಹೆಚ್ಚಳ

ಪಿಟಿಐ
Published 3 ಸೆಪ್ಟೆಂಬರ್ 2020, 14:26 IST
Last Updated 3 ಸೆಪ್ಟೆಂಬರ್ 2020, 14:26 IST
ಆಲ್ಟ್ರೋಜ್‌– ಸಾಂದರ್ಭಿಕ ಚಿತ್ರ
ಆಲ್ಟ್ರೋಜ್‌– ಸಾಂದರ್ಭಿಕ ಚಿತ್ರ   

ನವದೆಹಲಿ: ಟಾಟಾ ಮೋಟರ್ಸ್‌ ಕಂಪನಿಯ ಆಗಸ್ಟ್‌ ತಿಂಗಳ ಒಟ್ಟಾರೆ ಮಾರಾಟ ಶೇಕಡ 13.38ರಷ್ಟು ಹೆಚ್ಚಾಗಿದೆ.

ಹಿಂದಿನ ವರ್ಷ ಆಗಸ್ಟ್‌ನಲ್ಲಿ 32,166 ವಾಹನಗಳನ್ನು ಮಾರಾಟ ಮಾಡಲಾಗಿತ್ತು. ಈ ಬಾರಿ 36,472 ವಾಹನಗಳು ಮಾರಾಟವಾಗಿವೆ ಎಂದು ಕಂಪನಿ ತಿಳಿಸಿದೆ.

ದೇಶಿ ಮಾರಾಟ ಶೇ 21.6ರಷ್ಟು ಹೆಚ್ಚಾಗಿದ್ದು, ಒಟ್ಟು 35,420 ವಾಹನಗಳು ಮಾರಾಟವಾಗಿವೆ ಎಂದು ಹೇಳಿದೆ.

ADVERTISEMENT

ಪ್ರಯಾಣಿಕ ವಾಹನ ಮಾರಾಟ 7,316ರಿಂದ 18,583ಕ್ಕೆ ಏರಿದ್ದು, ಎರಡು ಪಟ್ಟಿಗಿಂತ ಹೆಚ್ಚಾದಂತಾಗಿದೆ. ಆದರೆ, ವಾಣಿಜ್ಯ ವಾಹನ ಮಾರಾಟ ಶೇ 28ರಷ್ಟು ಇಳಿಕೆಯಾಗಿದೆ ಎಂದು ಅದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.