ADVERTISEMENT

ಟಾಟಾ ಮೋಟರ್ಸ್‌ನ ವಿದ್ಯುತ್ ಚಾಲಿತ ಕಾನ್ಸೆಪ್ಟ್‌ ಕಾರ್‌ ‘ಅವಿನ್ಯಾ’ ಅನಾವರಣ

ರಾಯಿಟರ್ಸ್
Published 29 ಏಪ್ರಿಲ್ 2022, 13:34 IST
Last Updated 29 ಏಪ್ರಿಲ್ 2022, 13:34 IST
ಟಾಟಾ ಮೋಟರ್ಸ್‌ನ ವಿದ್ಯುತ್ ಚಾಲಿತ ಕಾನ್ಸೆಪ್ಟ್‌ ಕಾರ್‌ ಅವಿನ್ಯಾ –ಎಎಫ್‌ಪಿ
ಟಾಟಾ ಮೋಟರ್ಸ್‌ನ ವಿದ್ಯುತ್ ಚಾಲಿತ ಕಾನ್ಸೆಪ್ಟ್‌ ಕಾರ್‌ ಅವಿನ್ಯಾ –ಎಎಫ್‌ಪಿ   

ನವದೆಹಲಿ: ಟಾಟಾ ಮೋಟರ್ಸ್‌ ಕಂಪನಿಯು ‘ಅವಿನ್ಯಾ’ ಹೆಸರಿನ ವಿದ್ಯುತ್ ಚಾಲಿತ ಕಾನ್ಸೆಪ್ಟ್‌ ಕಾರನ್ನು ಶುಕ್ರವಾರ ಅನಾವರಣಗೊಳಿಸಿತು.

2025ರ ವೇಳೆಗೆ ಮೊದಲ ಮಾದರಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಆಲೋಚನೆಯನ್ನು ಕಂಪನಿ ಹೊಂದಿದೆ. ಈ ಮಾದರಿಯು ಒಮ್ಮೆ ಚಾರ್ಜ್‌ ಮಾಡಿದರೆ ಕನಿಷ್ಠ 500 ಕಿಲೋ ಮೀಟರ್‌ ದೂರ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿರಲಿದೆ. ಆಧುನಿಕ ತಂತ್ರಜ್ಞಾನ, ತಂತ್ರಾಂಶ ಮತ್ತು ಕೃತಕ ಬುದ್ಧಿಮತ್ತೆಯನ್ನು ಒಳಗೊಂಡಿರಲಿದೆ ಎಂದು ಕಂಪನಿ ತಿಳಿಸಿದೆ.

ಕಂಪನಿಯು ಈಗ ದೇಶದಲ್ಲಿ ವಿದ್ಯುತ್ ಚಾಲಿತ ಪ್ರಯಾಣಿಕ ವಾಹನ ವಿಭಾಗದಲ್ಲಿ ಮುಂಚೂಣಿಯಲ್ಲಿ ಇದ್ದು, ಜೆನ್‌–3 ವಿನ್ಯಾಸದ ಆಧಾರದ ಮೇಲೆ ಈ ಕಾನ್ಸೆಪ್ಟ್‌ ಕಾರ್‌ ಅಭಿವೃದ್ಧಿಪಡಿಸಲಾಗಿದೆ.

ADVERTISEMENT

ಈ ಕಾನ್ಸೆಪ್ಟ್‌ ಕಾರಿನಿಂದಾಗಿ ವಿದ್ಯುತ್ ಚಾಲಿತ ವಾಹಗಳ ಅಳವಡಿಕೆಗೆ ವೇಗ ದೊರೆಯಲಿದೆ. ಅಲ್ಲದೆ, ವಿದ್ಯುತ್ ಚಾಲಿತ ವಾಹನ ವಿಭಾಗವನ್ನು ಇದು ಮುನ್ನಡೆಸಲಿದೆ ಎಂದು ಟಾಟಾ ಸನ್ಸ್‌ ಅಧ್ಯಕ್ಷ ಎನ್‌. ಚಂದ್ರಶೇಖರನ್ ಅವರು ಕಾರು ಅನಾವರಣ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

ಅಂತಿಮವಾಗಿ ಜಾಗತಿಕ ಮಾರುಕಟ್ಟೆಯನ್ನು ತಲುಪುವುದು ತಮ್ಮ ಗುರಿ ಎಂದು ಅವರು ಹೇಳಿದ್ದಾರೆ.

‘ಅವಿನ್ಯಾ’ ಮೂಲಕ ಮುಂದಿನ ಪೀಳಿಗೆಯ ವಿದ್ಯುತ್ ಚಾಲಿತ ವಾಹನಗಳ ತಯಾರಿಕೆಯತ್ತ ಕಂಪನಿಯು ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಟಾಟಾ ಮೋಟರ್ಸ್‌ನ ಪ್ರಯಾಣಿಕ ವಾಹನ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್‌ ಚಂದ್ರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.