ADVERTISEMENT

ಇಲ್ಲಿದ್ದಾರೆ ಡಿಸ್ನಿ ಮಾಮ್‌!

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 19:30 IST
Last Updated 31 ಆಗಸ್ಟ್ 2018, 19:30 IST
ರಾಚೆಲ್‌
ರಾಚೆಲ್‌   

ಡಿಸ್ನಿ ಗೊಂಬೆಗಳಂತೆ ಕಾಣಲು ಆಪರೇಷನ್‌, ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡವರ ಕತೆ ಕೇಳಿದ್ದೇವೆ.ಆದರೆ ಇಲ್ಲೊಬ್ಬ ತಾಯಿ ದಿನಕ್ಕೆ ಹತ್ತಕ್ಕೂ ಬಗೆ ಬಗೆಡಿಸ್ನಿ ರೂಪದಲ್ಲಿ ತನ್ನನ್ನು ತಾನು ಅಲಂಕರಿಸಿಕೊಂಡು ಪ್ರದರ್ಶನ ನೀಡುತ್ತಾ ಹಣ ಗಳಿಸುತ್ತಿದ್ದಾರೆ. ವಿಶೇಷತೆಯೆಂದರೆ ಅವರು ಡಿಸ್ನಿ ರಾಣಿಯಂತೆ ಅಲಂಕರಿಸಿಕೊಂಡರೆ ಸ್ವತಃ ಅವರ ಮಕ್ಕಳೂ ಅವರನ್ನು ಗುರುತು ಹಿಡಿಯುವುದಿಲ್ಲವಂತೆ.

ಯುರೋಪ್‌ನ 32 ವರ್ಷದ ರಾಚೆಲ್‌ ಡಗ್ಲಾಸ್‌ ಅವರೇ ಈ ಮಹಿಳೆ. ಅಲ್ಲಿನ ಪಾರ್ಟಿಗಳಲ್ಲಿ ಇಂತಹ ಡಿಸ್ನಿ ಅಲಂಕಾರಕ್ಕೆ ತುಂಬಾ ಬೇಡಿಕೆಯಿರುವುದರಿಂದ ತಮ್ಮ ಹವ್ಯಾಸವನ್ನೇ ಮುಂದುವರಿಸಿ, ಹಣ ಗಳಿಕೆ ಮಾರ್ಗವನ್ನಾಗಿಸಿಕೊಂಡಿದ್ದಾರೆ. ‘ನಾನು ಡಿಸ್ನಿ ಮಾಮ್‌’ ಎಂದು ಅವರೇ ಹೇಳಿಕೊಂಡಿದ್ದಾರೆ.

ರಾಚೆಲ್‌ ಹೀಗೆ ಅಲಂಕಾರ ಮಾಡಿಕೊಂಡು, ಪಾರ್ಟಿಗಳಲ್ಲಿಗಂಟೆಗೆ ₹10 ಸಾವಿರ ದುಡಿಯುತ್ತಿದ್ದಾರೆ.ಮೂರು ವರ್ಷದ ಹಿಂದೆ ಸ್ನೇಹಿತೆಯ ಹುಟ್ಟುಹಬ್ಬದ ಪಾರ್ಟಿಗೆ ಡಿಸ್ನಿಯಂತೆ ಅಲಂಕರಿಸಿಕೊಂಡ ಅವರಿಗೆ ಅಲ್ಲಿ ಬಂದ ಸಕಾರಾತ್ಮಕ ಪ್ರತಿಕ್ರಿಯೆಯೇ ಇದಕ್ಕೆ ಕಾರಣ ಎಂದು ಹೇಳಿಕೊಂಡಿದ್ದಾರೆ.

ADVERTISEMENT

‘ತಾನು ಅತೀ ಹೆಚ್ಚು ಸಿನಿಮಾಗಳನ್ನು ನೋಡುತ್ತೇನೆ. ಯಾವಾಗಲೂ ಯಾವ ರೀತಿಯಲ್ಲೆಲ್ಲಾ ಮೇಕಪ್‌ ಮಾಡಿಕೊಳ್ಳಬಹುದು ಎಂದು ಯೋಚಿಸುತ್ತೇನೆ. ವಾರದಲ್ಲಿ 40 ಗಂಟೆ ನಾನು ಈ ಕೆಲಸ ಮಾಡುತ್ತೇನೆ. ಸಿನಿಮಾ ನೋಡಿ ಡಿಸ್ನಿ ಮಾತನಾಡುವಂತೆ ಮಾಡುತ್ತೇನೆ. ಇದು ಮಕ್ಕಳನ್ನು ಆಕರ್ಷಿಸುತ್ತದೆ’ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.