ಮಿಲಾ ಮಾಗೀ
ಹೈದರಾಬಾದ್: ವಿಶ್ವಸುಂದರಿ ಸ್ಪರ್ಧೆ 2025 ಹೈದರಾಬಾದ್‌ನಲ್ಲಿ ನಡೆಯುತ್ತಿದ್ದು, ಅಂತಿಮ ಸುತ್ತು ಹತ್ತಿರವಾಗುತ್ತಿದ್ದಂತೆ ಮಿಸ್ ಇಂಗ್ಲೆಂಡ್ ಮಿಲ್ಲಾ ಮ್ಯಾಗಿ ಸ್ಪರ್ಧೆಯಿಂದ ಹೊರನಡೆದಿದ್ದಾರೆ.
ತಾಯಿ ಅನಾರೋಗ್ಯಕ್ಕೆ ತುತ್ತಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಮಿಲಾ ಮಾಗೀ, ಸ್ಪರ್ಧೆಯಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡರು ಎಂದು ಆಯೋಜಕರು ತಿಳಿಸಿದ್ದಾರೆ.
ಇದರ ಬೆನ್ನಲ್ಲೇ ಮಿಸ್ ಇಂಗ್ಲೆಂಡ್‌ನ ಮೊದಲ ರನ್ನರ್ ಅಪ್ ಚಾರ್ಲಟ್ ಗ್ರಾಂಟ್ ಅವರು ಕಣಕ್ಕಿಳಿದು ತಮ್ಮ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಮ್ಯಾಗಿ ನಿರ್ಗಮನ ಘೋಷಣೆಯಾಗುತ್ತಿದ್ದಂತೆ ಭಾರತಕ್ಕೆ ಬಂದಿಳಿದ ಗ್ರಾಂಟ್ ಅವರನ್ನು ಹೈದರಾಬಾದ್‌ನಲ್ಲಿ ಆದರದಿಂದ ಬರಮಾಡಿಕೊಳ್ಳಲಾಯಿತು.
‘ತಾಯಿ ಆನಾರೋಗ್ಯಕ್ಕೆ ತುತ್ತಾಗಿರುವುದರಿಂದ ತಕ್ಷಣ ನಿರ್ಗಮಿಸಲು ಮಿಲಾ ಮಾಗೀ ಕೋರಿಕೊಂಡಿದ್ದರು. ವಿಶ್ವಸುಂದರಿ ಸ್ಪರ್ಧೆಯ ಅಧ್ಯಕ್ಷೆ ಜೂಲಿಯಾ ಮರ್ಲೇ ಅವರು ಅದಕ್ಕೆ ಒಪ್ಪಿಗೆ ಸೂಚಿಸಿದರು. ಕುಟುಂಬ ಮೊದಲು ಎಂದು ಹೇಳಿದ ಅವರು, ಇಂಗ್ಲೆಂಡ್ ಪ್ರತಿನಿಧಿಸಲು ತಕ್ಷಣ ಮತ್ತೊಬ್ಬ ಸ್ಪರ್ಧಿಯನ್ನು ಕಳುಹಿಸಲು ಸೂಚಿಸಿದರು’ ಎಂದು ಆಯೋಜಕರು ಹೇಳಿದ್ದಾರೆ.
ವಿಶ್ವ ಸುಂದರಿ ಸ್ಪರ್ಧೆಯು ಹೈದರಾಬಾದ್‌ನಲ್ಲಿ ಮೇ 10ರಿಂದ ಆರಂಭಗೊಂಡಿದೆ. ಮೇ 31ರಂದು ಅಂತಿಮ ಸುತ್ತು ನಡೆಯಲಿದ್ದು, ಯಾರ ಮುಡಿಗೆ ವಿಶ್ವ ಸುಂದರಿ ಕಿರೀಟ ಎಂಬುದು ಘೋಷಣೆಯಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.