
ಫಾತಿಮಾ ಬಾಷ್
ಚಿತ್ರ ಕೃಪೆ: ಎಕ್ಸ್
ಬ್ಯಾಂಕಾಕ್: ಥಾಯ್ಲೆಂಡ್‌ನಲ್ಲಿ ನಡೆದ ಪ್ರತಿಷ್ಥಿತ ಸೌಂದರ್ಯ ಸ್ಪರ್ಧೆಗಳಲ್ಲಿ ಒಂದಾದ ಮಿಸ್ ಯುನಿವರ್ಸ್ ಸ್ಪರ್ಧೆಯ 74ನೇ ಆವೃತ್ತಿಯಲ್ಲಿ ಮೆಕ್ಸಿಕೊದ ಫಾತಿಮಾ ಬಾಷ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಕಳೆದ ಬಾರಿಯ ಮಿಸ್ ಯುನಿವರ್ಸ್ ವಿಜೇತೆ ಡೆನ್ಮಾರ್ಕ್‌ನ ವಿಕ್ಟೋರಿಯಾ ಕೆಜೆರ್ ಥೀಲ್ವಿಗ್ ಅವರು ಫಾತಿಮಾ ಅವರಿಗೆ ಕಿರೀಟವನ್ನು ತೊಡಿಸಿದರು.
ಥಾಯ್ಲೆಂಡ್ ಸ್ಪರ್ಧಿ ಪ್ರವೀನರ್ ಸಿಂಗ್ ಮೊದಲ ರನ್ನರ್ ಅಪ್ ಆಗಿ ಮತ್ತು ವೆನೆಜುವೆಲಾ ಸ್ಪರ್ಧಿ ಸ್ಟೆಪನಿ ಅಬಸಾಲಿ ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದರು.
ಫಾತಿಮಾ ಅವರು ಕಿರೀಟ ಧರಿಸುವ ಸಂದರ್ಭದಲ್ಲಿ ಭಾವುಕರಾಗಿ ಸಂಭ್ರಮಿಸಿದ ವಿಡಿಯೊವನ್ನು ಮಿಸ್ ಯುನಿವರ್ಸ್ ಸಂಸ್ಥೆ ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
25 ವರ್ಷದ ಫಾತಿಮಾ ಮಿಸ್ ಯುನಿವರ್ಸ್ ಸ್ಪರ್ಧೆ ಗೆದ್ದ ನಾಲ್ಕನೇ ಮೆಕ್ಸಿಕನ್ ಮಹಿಳೆಯಾಗಿದ್ದಾರೆ.
ತೀರ್ಪುಗಾರರ ಸಾಲಿನಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಇದ್ದರು.
ಭಾರತದಿಂದ ಸ್ಪರ್ಧಿಸಿದ್ದ ಮಣಿಕಾ ವಿಶ್ವಕರ್ಮ
ಭಾರತದಿಂದ ಮಣಿಕಾ ವಿಶ್ವಕರ್ಮ ಅವರು ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 15 ಸುತ್ತುಗಳವರೆಗೆ ಸ್ಪರ್ಧೆಯಲ್ಲಿದ್ದ ಮಣಿಕಾ, ಅದ್ಭುತ ಪ್ರದರ್ಶನದ ಹೊರತಾಗಿಯೂ ಸ್ಪರ್ಧೆಯಿಂದ ಹೊರಬಿದ್ದರು. ಹೀಗಾಗಿ ಅವರು ಟಾಪ್ 12ರಲ್ಲಿ ಇರಲು ಸಾಧ್ಯವಾಗಲಿಲ್ಲ.
ಈ ಹಿಂದೆ ಭಾರತ ಮೂರು ಬಾರಿ ಮಿಸ್ ಯುನಿವರ್ಸ್ ಸ್ಪರ್ಧೆ ಗೆದ್ದಿತ್ತು. 1994 ಸುಶ್ಮಿತಾ ಸೇನ್, 2000ರಲ್ಲಿ ಲಾರಾ ದತ್ತಾ ಮತ್ತು 2021ರಲ್ಲಿ ಹರ್ನಾಜ್ ಸಂಧು ಕಿರೀಟ ಮುಡಿಗೇರಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.