ADVERTISEMENT

ಪ್ಲಾಸ್ಟಿಕ್‌ ವಿಲೇವಾರಿ ಮಾಡುವ ಪರಿಣಾಮಕಾರಿ ಮಾರ್ಗಗಳು ಇಲ್ಲಿವೆ ನೋಡಿ‌

ಪ್ರಾಯೋಜಿತ ಬರಹ
Published 3 ಫೆಬ್ರುವರಿ 2020, 10:38 IST
Last Updated 3 ಫೆಬ್ರುವರಿ 2020, 10:38 IST
   

ಭಾರತದ ಬಹುತೇಕ ಮನೆಗಳಲ್ಲಿ ತ್ಯಾಜ್ಯ ವಸ್ತುಗಳನ್ನು ವಿಂಗಡಿಸುವುದರ ಪ್ರಾಮುಖ್ಯತೆಯನ್ನು ಕಡೆಗಣಿಸಲಾಗುತ್ತದೆ. ನಾವು ನಮ್ಮ ಮನೆಯ ತ್ಯಾಜ್ಯ ವಸ್ತುಗಳನ್ನು ಮೂಲದಲ್ಲೇ ಸರಿಯಾದ ರೀತಿಯಲ್ಲಿ ಪ್ರತ್ಯೇಕಿಸುವುದನ್ನು ಮರೆಯುತ್ತೇವೆ ಮತ್ತು ಎಲ್ಲಾ ಬಗೆಯ ತ್ಯಾಜ್ಯ ವಸ್ತುಗಳನ್ನೂ ಒಂದೇ ಕಸದ ಬುಟ್ಟಿಗೆ ಸುರಿಯುತ್ತೇವೆ. ಇದರ ಪರಿಣಾಮ, ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್‌ ಸೇರಿದಂತೆ ಎಲ್ಲವೂ ಭೂಮಿಯಲ್ಲಿ ಬೆರೆತು ಪರಿಸರಕ್ಕೆ ಭಾರೀ ಸಮಸ್ಯೆ ತಂದೊಡ್ಡುತ್ತದೆ. ಪ್ರಜ್ಞಾವಂತ ನಾಗರಿಕರಾಗಿ ನಾವು ತ್ಯಾಜ್ಯ ವಿಲೇವಾರಿಯ ವಿಷವರ್ತುಲವನ್ನು ನಿವಾರಣೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಇತ್ತೀಚಿನ ವರದಿಯೊಂದರ ಪ್ರಕಾರ, ನಮ್ಮ ದೇಶದಲ್ಲಿ ವಾರ್ಷಿಕವಾಗಿ ಉತ್ಪತ್ತಿಯಾಗುವ 90.4 ಲಕ್ಷ ಟನ್‌ಗಳಷ್ಟು ತ್ಯಾಜ್ಯ ವಸ್ತುಗಳ ಪೈಕಿ, ಶೇ 40 ರಷ್ಟು ಸಮರ್ಪಕವಾಗಿ ವಿಲೇವಾರಿಯಾಗುತ್ತಿಲ್ಲ. ರಸ್ತೆ ಹಾಗೂ ಇತರ ಕಡೆ ಇವುಗಳನ್ನು ಚೆಲ್ಲಲಾಗುತ್ತದೆ. ಮರುಬಳಕೆಯ ಸೌಲಭ್ಯವಿದ್ದಾಗಲೂ ಕಸ ಹಾಕಬಾರದ ಕಡೆಗಳಲ್ಲೇ ಜನರು ಈ ಕಸಗಳನ್ನು ಬಿಸಾಕುವುದು ಈ ಕುರಿತ ಜನಜಾಗೃತಿಯ ಕೊರತೆಯ ಪ್ರತೀಕ.

ಭಾರತದಲ್ಲಿರುವ ಸುಮಾರು 10 ಲಕ್ಷ ಚಿಂದಿ ಆಯುವವರು ಅಸಂಘಟಿತ ವಲಯಕ್ಕೆ ಸೇರಿದವರಾಗಿದ್ದರೂ ದೇಶದಲ್ಲಿ ವಾರ್ಷಿಕವಾಗಿ ಸೃಷ್ಟಿಯಾಗುವ 62 ಲಕ್ಷ ಟನ್‌ಗಳಷ್ಟು ಪ್ಲಾಸ್ಟಿಕ್‌ ಸ್ವಚ್ಛಗೊಳಿಸಲು ಅವರು ನೆರವಾಗುತ್ತಿದ್ದಾರೆ ಎಂಬ ಸಂಗತಿ ನಿಮಗೆ ಗೊತ್ತೇ? ಅವರು ಪ್ಲಾಸ್ಟಿಕ್ ಸಂಗ್ರಹಿಸಿ ವಿವಿಧ ಮರುಬಳಕೆಯ ಘಟಕಗಳಿಗೆ ಪೂರೈಕೆ ಮಾಡುತ್ತಾರೆ ಮತ್ತು ನಮ್ಮ ದೇಶದ ಪ್ಲಾಸ್ಟಿಕ್‌ ನಿರ್ವಹಣೆ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ವಿವಿಧ ರೀತಿಯ ವಿಂಗಡಣೆ ಮತ್ತು ಮರುಬಳಕೆ ಘಟಕಗಳಿಗೆ ಪ್ಲಾಸ್ಟಿಕ್‌ ಅನ್ನು ಇವರು ನೇರವಾಗಿ ಪೂರೈವುದರಿಂದಾಗಿ ಪ್ಲಾಸ್ಟಿಕ್ ಮರುಬಳಕೆಯಸಲ್ಲಿ ಇವರ ಪಾತ್ರವೇ ಅಧಿಕ. ಒಟ್ಟಿನಲ್ಲಿ ನಾವು ತ್ಯಾಜ್ಯ ವಿಂಗಡಣೆಯ ಪ್ರಾಮುಖ್ಯವನ್ನು ಅರ್ಥಮಾಡಿಕೊಳ್ಳುವ ಮತ್ತು ಇತರರಿಗೆ ಅರ್ಥ ಮಾಡಿಸುವ ಮೂಲಕ ಪರಿಸರದಲ್ಲಿ ಅಪಾರ ಬದಲಾವಣೆ ತರಬಹುದು ಎಂದು ಹೇಳಬಹುದು.

ಭಾರತದಲ್ಲಿ ಸುಮಾರು 6 ಲಕ್ಷ ಮಂದಿ ಪ್ರತ್ಯಕ್ಷ ಮತ್ತು ಅಂದಾಜು 10 ಲಕ್ಷ ಮಂದಿ ಪರೋಕ್ಷವಾಗಿ ಪ್ಲಾಸ್ಟಿಕ್‌ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜತೆಗೆ, ಚಿಂದಿ ಆಯುವವರು ಸೇರಿದಂತೆ 33 ಸಾವಿರಕ್ಕೂ ಹೆಚ್ಚು ಸಂಘಟಿತ ಹಾಗೂ 4 ಸಾವಿರಕ್ಕೂ ಹೆಚ್ಚು ಅಸಂಘಟಿತ ವಲಯದಲ್ಲಿ ಮರುಬಳಕೆ ಘಟಕಗಳು ಕಾರ್ಯಾಚರಿಸುತ್ತಿವೆ. ಆದರೆ ಅವೆಲ್ಲವೂ ಲಾಭದ ಕಡೆ ಗಮನ ಕೊಡುವುದರಿಂದ ಪ್ಲಾಸ್ಟಿಕ್‌ ಪತ್ತೆಗೆ ಹಾಗೂ ಮರುಬಳಕೆಗೆ ಆದ್ಯತೆ ನೀಡುತ್ತಿಲ್ಲ. ನಮ್ಮ ತ್ಯಾಜ್ಯ ವಿಲೇವಾರಿ ಅಭ್ಯಾಸಗಳನ್ನು ಬದಲಿಸಿಕೊಳ್ಳುವುದು ಮಾತ್ರ ಪ್ಲಾಸ್ಟಿಕ್‌ ಮರುಬಳಕೆ ಅಭಿಯಾನವು ಯಶಸ್ವಿಯಾಗುವ ಏಕೈಕ ಮಾರ್ಗ. ಪ್ಲಾಸ್ಟಿಕ್‌ ಇತರ ಸಾಮಾನ್ಯ ತ್ಯಾಜ್ಯಕ್ಕಿಂತಲೂ ಮಿಗಿಲಾಗಿ ಮರುಬಳಕೆ ಮಾಡಬಹುದಾದ ಸಂಪನ್ಮೂಲ. ಹೀಗಾಗಿ ನಾವು ಈ ಕುರಿತಾದ ಪರಿಕಲ್ಪನೆಯಲ್ಲಿ ಮತ್ತು ಅದರ ವಿಲೇವಾರಿ ಕ್ರಮಗಳಲ್ಲಿ ಅಪಾರ ಬದಲಾವಣೆ ತರುವ ಪ್ರಯತ್ನಗಳಾಗಬೇಕಿದೆ. ಪ್ಲಾಸ್ಟಿಕ್‌ ವಿಲೇವಾರಿ ಮಾಡುವಾಗ ನಾವು ಅದರ ಮರುಬಳಕೆಯ ಸಾಧ್ಯತೆ ಆಧರಿಸಿ ಅವುಗಳನ್ನು ಶುಚಿಗೊಳಿಸಿ, ವಿಂಗಡಿಸಿ ಪ್ರತ್ಯೇಕವಾಗಿ ವಿಲೇವಾರಿ ಮಾಡಬೇಕು.

ADVERTISEMENT

ತ್ಯಾಜ್ಯಗಳನ್ನು ಮೂಲದಲ್ಲಿಯೇ ಪ್ರತ್ಯೇಕಿಸುವುದು ನಾಗರಿಕರ ಒಟ್ಟಾರೆ ಆರೋಗ್ಯವನ್ನು ಸುಧಾರಿಸುವುದಷ್ಟೇ ಅಲ್ಲದೆ, ಆರ್ಥಿಕವಾಗಿ ಮತ್ತು ಪಾರಿಸರಿಕವಾಗಿಯೂ ಕಾರ್ಯಸಾಧು ಎಂದು ಪರಿಗಣಿತವಾಗಿದೆ. ಈ ಪ್ರಕ್ರಿಯೆಯಲ್ಲಿ ಭೂಮಿ ಮತ್ತು ಸಾಗರಗಳಲ್ಲಿ ಪ್ಲಾಸ್ಟಿಕ್‌ ಬೆರೆಯುವಿಕೆ ಕಡಿಮೆಯಾಗುವುದಲ್ಲದೆ ಹೆಚ್ಚಿನ ಪ್ಲಾಸ್ಟಿಕ್‌ ಅನ್ನು ಮರುಬಳಕೆ ಘಟಕಗಳಲ್ಲಿ ವಸ್ತುಗಳು, ಗೃಹಬಳಕೆ ಉತ್ಪನ್ನಗಳು ಮತ್ತು ಇತರ ರೂಪಗಳಲ್ಲಿ ಉತ್ತಮವಾಗಿ ಬಳಸಬಹುದಾಗಿದೆ. ಕೆಲವೊಮ್ಮೆ ಜನರು ಒಂದೇ ಕಸದ ಬುಟ್ಟಿಯಲ್ಲಿ ಎಲ್ಲಾ ಬಗೆಯ ತ್ಯಾಜ್ಯವಸ್ತುಗಳನ್ನು ಬೆರೆಸುವುದು ಅಗಾಧ ಪಾರಿಸರಿಕ ಸಮಸ್ಯೆಗಳಿಗೆ ಎಡೆಮಾಡಿಕೊಡಬಹುದು ಎಂಬ ಸಂಗತಿಯನ್ನು ಮನಗಾಣದೆ ಹೋಗುತ್ತಾರೆ. ಪ್ಲಾಸ್ಟಿಕ್‌ಗಾಗಿ ಪ್ರತ್ಯೇಕ ಬುಟ್ಟಿ ಇಡುವುದು, ಕಸ ವಿಲೇವಾರಿ ವೇಳೆ ಯಾವುದೇ ಮಿಶ್ರಣಕ್ಕೆ ಆಸ್ಪದ ಕೊಡದಂತಿರುವುದು ಆದರ್ಶಪ್ರಾಯ ಸಂಗತಿಯಾಗುತ್ತದೆ. ಸ್ವಚ್ಚ ಪ್ಲಾಸ್ಟಿಕ್‌ ಅನ್ನು ಮರುಬಳಕೆಗೆ ಕಳುಹಿಸಬೇಕು, ಇಲ್ಲವಾದರೆ ಅವು ಭೂಮಿಯಲ್ಲಿ ಸೇರಿಬಿಡುತ್ತವೆ ಎಂಬ ಅಂಶವನ್ನು ಗಮನದಲ್ಲಿರಿಸಿಕೊಳ್ಳಬೇಕು. ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ಅನ್ನು ಬಿಸಾಡುವುದರ ಬದಲಾಗಿ ಒಂದಲ್ಲ ಒಂದು ಬಗೆಯಲ್ಲಿ ಪ್ಲಾಸ್ಟಿಕ್‌ ಅನ್ನು ಬಳಕೆ ಮಾಡಬಹುದೆಂಬುದೇ ನಮ್ಮ ಯೋಚನೆಯಾಗಬೇಕಿದೆ. ಪ್ಲಾಸ್ಟಿಕ್‌ ಸಮರ್ಪಕ ಮರುಬಳಕೆಯಿಂದ ಅನೇಕ ಪ್ರಯೋಜನಗಳಿರುವುದರಿಂದ ಯಾವುದೇ ತಪ್ಪಿತಸ್ಥ ಭಾವನೆ ಇಲ್ಲದೆ ಬಳಸುವುದನ್ನು ಮುಂದುವರಿಸಬಹುದು. ಇದು ಪರಿಸರ ಸಂರಕ್ಷಣೆಗೂ ಮಹತ್ತರ ಕೊಡುಗೆ ನೀಡಬಲ್ಲುದು.

ಪ್ಲಾಸ್ಟಿಕ್‌ ಮರುಬಳಕೆಯ ಪ್ರಾಮುಖ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಶ್ರಮಿಸುತ್ತಿರುವ ಅನೇಕ ಅಭಿಯಾನಗಳಿವೆ. ಇಂತಹ ಒಂದು ಉದಾಹರಣೆ ಎಂದರೆ ಬಾಟಲ್ಸ್‌ ಫಾರ್ ಚೇಂಜ್‌ (Bottles for Change). ಇವರು ಸಾರ್ವಜನಿಕರಿಗೆ ಪ್ಲಾಸ್ಟಿಕ್‌ ತ್ಯಾಜ್ಯದ ವಿಲೇವಾರಿ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಉಪಯೋಗಿಸದ ಹಾಗೂ ಸ್ವಚ್ಛವಾದ ಪ್ಲಾಸ್ಟಿಕ್‌ ಸಂಗ್ರಹಕ್ಕೆ ತಂಡವನ್ನು ರಚಿಸಿದ್ದಾರೆ. ಅವುಗಳನ್ನು ಪ್ರತ್ಯೇಕಿಸಿ ಮರುಬಳಕೆ ಘಟಕಗಳಿಗೆ ಸರಬರಾಜು ಮಾಡುತ್ತಾರೆ. ಅವರು ಮಾಡಿರುವ ಒಂದು ಅತ್ಯುತ್ತಮ ಕೆಲಸವೆಂದರೆ ಪ್ಲಾಸ್ಟಿಕ್ ವಿಲೇವಾರಿಯಲ್ಲಿ ತೊಡಗಿಸಿಕೊಂಡವರಿಗೆ ಆರೋಗ್ಯಕರ ಪರಿಸರದಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಿರುವುದು. ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುವುದು. ಈ ಬಗೆಯ ಜಾಗೃತಿ ಮೂಡಿಸುವುದು ಜನರಿಗೆ ಪ್ಲಾಸ್ಟಿಕ್‌ ಮರುಬಳಕೆಯ ಪ್ರಾಮುಖ್ಯವನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತದೆ.

ಸ್ವಚ್ಛತೆಗೆ ಹಾಗೂ ಪರಿಸರಕ್ಕೆ ಪೂರಕವಾದ ಪ್ಲಾಸ್ಟಿಕ್‌ ವಿಲೇವಾರಿಯ ಪ್ರಜ್ಞಾಪೂರ್ವಕ ಕ್ರಮಗಳು ನಮ್ಮ ಮನೆಗಳಿಂದಲೇ ಮೊದಲಾಗಬೇಕು. ನಾವು ಬಳಸುವ ಪ್ಲಾಸ್ಟಿಕ್‌ ವಸ್ತುಗಳನ್ನು ದಕ್ಷ ರೀತಿಯಲ್ಲಿ ವಿಂಗಡಣೆ ಮಾಡಿ, ಚಿಂದಿ ಆಯುವವರಿಗೆ ನೀಡುವುದು ಅಥವಾ ಇತರೆ ಯಾವುದೇ ಸಂಭವನೀಯ ರೀತಿಯಲ್ಲಿ ಪ್ಲಾಸ್ಟಿಕ್‌ ಮರುಬಳಕೆ ಮಾಡುವತ್ತ ಗಮನ ಕೇಂದ್ರಿಕರಿಸಬೇಕು. ಹೊಸ ಪ್ಲಾಸ್ಟಿಕ್‌ ಉತ್ಪನ್ನಗಳ ಸಂಗ್ರಹದಿಂದ ಪರಿಸರಕ್ಕೆ ನೆರವಾಗಬೇಕು. ನಿಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಅಪಾಯಕಾರಿಯಲ್ಲದ ರೀತಿಯಲ್ಲಿ ವಿಂಗಡಿಸುವ ಮೂಲಕ ಅಪಾರ ಪ್ರಮಾಣದ ತ್ಯಾಜ್ಯ ವಿಲೇವಾರಿ ಮತ್ತು ನೈರ್ಮಲ್ಯ ಸಮಸ್ಯೆಗಳನ್ನು ಪರಿಹರಿಸಬಹುದಾಗಿದೆ.

ನಮ್ಮ ಅಭ್ಯಾಸಗಳನ್ನು ಬದಲಿಸಿಕೊಳ್ಳುವ ಮೂಲಕ ಪರಿಸರದ ಮೇಲೆ ಪ್ಲಾಸ್ಟಿಕ್‌ನಿಂದಾಗಬಹುದಾದ ಅಪಾಯಗಳನ್ನು ತಪ್ಪಿಸಬಹುದು. ಹೊಸದಾದ ಪ್ಲಾಸ್ಟಿಕ್‌ಗಳ ಉತ್ಪಾದನೆಗೆ ಬದಲಾಗಿ ನಿರಂತರವಾಗಿ ಪ್ಲಾಸ್ಟಿಕ್‌ ಅನ್ನು ಮರುಬಳಕೆ ಮಾಡುವ ಆವರ್ತ ಆರ್ಥಿಕತೆಯನ್ನು ಸೃಷ್ಟಿಸುವುದು, ನಮ್ಮ ಪರಿಸರ ರಕ್ಷಣೆಯ ಹೊಣೆಗಾರಿಕೆ ವಹಿಸಿಕೊಳ್ಳುವ ಅತ್ಯಂತ ದಕ್ಷ ಮಾರ್ಗವಾಗಬಲ್ಲದು. ಇದು ಹಣ, ಶ್ರಮ ಮತ್ತು ನೈಸರ್ಗಿಕ ಸಂಪನ್ಮೂಲಗಳ ಉಳಿತಾಯಕ್ಕೆ ಸಹಾಯಕವಾಗುತ್ತದೆ.