ಪತಂಜಲಿ ನೈಸರ್ಗಿಕ ಉತ್ಪನ್ನಗಳೊಂದಿಗೆ ಸ್ವಾಮಿ ರಾಮದೇವ್. ಸಾಂಪ್ರದಾಯಿಕ ಆಯುರ್ವೇದ ಯೋಗಕ್ಷೇಮದ ಬಗ್ಗೆ ಅವರು ಹೊಂದಿರುವ ಬದ್ಧತೆಯನ್ನು ಈ ಚಿತ್ರ ತೋರುತ್ತದೆ.
ʼಪತಂಜಲಿ ಆಯುರ್ವೇದʼವು ಆರೋಗ್ಯ ಮತ್ತು ಯೋಗಕ್ಷೇಮದ ವಿಚಾರದಲ್ಲಿ ಇತ್ತೀಚಿನ ದಿನಗಳಲ್ಲಿ ಕ್ರಾಂತಿಯನ್ನುಂಟುಮಾಡಿದೆ. ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ಸ್ಥಾಪಿಸಿದ ಈ ಸಂಸ್ಥೆಯು ಪುರಾತನ ಹಾಗೂ ಆಧುನಿಕ ತಂತ್ರಜ್ಞಾನದ ವಿಧಾನಗಳ ಸಂಯೋಜನೆಯೊಂದಿಗೆ ಆಯುರ್ವೇದವನ್ನು ಆಧುನಿಕ ಆರೋಗ್ಯ ರಕ್ಷಣೆಯಲ್ಲಿ ಮುಂಚೂಣಿಗೆ ತಂದು ನಿಲ್ಲಿಸಿದೆ.
ಪತಂಜಲಿಯ ವ್ಯಾಪಕ ಶ್ರೇಣಿಯ ಉತ್ಪನ್ನಗಳು, ಯೋಗಕ್ಷೇಮ, ಆರೋಗ್ಯ ಹಾಗೂ ವೈದಿಕ ಆಚರಣೆಗಳ ಕಡೆಗಿನ ನಮ್ಮ ದೃಷ್ಟಿಕೋನದಲ್ಲಿ ಕ್ರಾಂತಿಯನ್ನುಂಟು ಮಾಡಿವೆ. ಆಯುರ್ವೇದದ ಪುನರುಜ್ಜೀವನ ಮತ್ತು ಸಮಗ್ರ ಸ್ವಾಸ್ಥ್ಯದ ಅಭ್ಯಾಸಗಳಿಗೆ ಆಧಾರವಾಗಿರುವ ಈ ಸಂಸ್ಥೆಯು, ಜಾಗತಿಕವಾಗಿ ಜೀವನ ವಿಧಾನವನ್ನು ಪರಿವರ್ತಿಸುತ್ತದೆ.
ಪತಂಜಲಿ ಆಯುರ್ವೇದ ಉತ್ಪನ್ನಗಳು ಸಾಂಪ್ರದಾಯಿಕ ನೈಸರ್ಗಿಕ ಚಿಕಿತ್ಸಾ ವಿಧಾನಗಳನ್ನು ಪರಿವರ್ತಿಸುವ ಮೂಲಕ ಆಧುನಿಕ ಜೀವನಶೈಲಿಯ ಪರಿಹಾರಗಳನ್ನು ಒದಗಿಸುತ್ತವೆ. ಜನರು ಸಾವಯವ ಮತ್ತು ಪರಿಸರಸ್ನೇಹಿ ಆರೋಗ್ಯ ಪರಿಹಾರಗಳನ್ನು ಅಪೇಕ್ಷಿಸುತ್ತಾರೆ. ಅದನ್ನು, ಪತಂಜಲಿಯು ಪ್ರಾಚೀನ ಆಯುರ್ವೇದ ಜ್ಞಾನದಿಂದ ತಯಾರಾದ ಉತ್ಪನ್ನಗಳ ಮೂಲಕ ಪೂರೈಸುತ್ತದೆ.
ಗಿಡಮೂಲಿಕೆಯಿಂದ ತಯಾರಿಸಿದ ಸೌಂದರ್ಯವರ್ಧಕಗಳು ಮತ್ತು ಸಾವಯವ ಆಹಾರ ಸೇರಿದಂತೆ ನೈಸರ್ಗಿಕ ಉತ್ಪನ್ನಗಳನ್ನು ಪತಂಜಲಿ ಒದಗಿಸುತ್ತದೆ. ಇವು, ಆಧುನಿಕ ಗ್ರಾಹಕರನ್ನು ಆಕರ್ಷಿಸುತ್ತವೆ. ಪಾರಂಪರಿಕ ಜ್ಞಾನ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಸಂಯೋಜನೆಯೊಂದಿಗೆ ತಯಾರಾದ ಪ್ರತಿಯೊಂದು ಉತ್ಪನ್ನವೂ ಪರಿಣಾಮಕಾರಿ ಹಾಗೂ ಸುರಕ್ಷಿತ ಎಂಬುದನ್ನು ಸಂಸ್ಥೆಯು ಖಾತ್ರಿಪಡಿಸುತ್ತದೆ.
ಸಮಗ್ರ ವೈದ್ಯಕೀಯ ವ್ಯವಸ್ಥೆಯಲ್ಲಿ ಪತಂಜಲಿಯು ವಿಶ್ವಾಸಾರ್ಹತೆಗೆ ಹೆಸರಾಗಿದ್ದು, ಸಾಂಪ್ರದಾಯಿಕ ಚಿಕಿತ್ಸಾ ವಿಧಾನಗಳೊಂದಿಗೆ ರಾಜಿ ಮಾಡಿಕೊಳ್ಳದೆ ತನ್ನ ಉತ್ಪನ್ನಗಳಲ್ಲಿ ಗುಣಮಟ್ಟವನ್ನು ಕಾಪಾಡಿಕೊಳ್ಳುತ್ತದೆ. ವಿಶ್ವಾಸಾರ್ಹತೆಯು ಈ ಬ್ರಾಂಡ್‌ನ ಯಶಸ್ಸಿಗೆ ಮತ್ತೊಂದು ಕಾರಣವಾಗಿದ್ದು, ಆಯುರ್ವೇದ ತತ್ವದ ಆಧಾರದಲ್ಲಿಯೇ ಪ್ರತಿಯೊಂದು ಉತ್ಪನ್ನವನ್ನು ತಯಾರಿಸಲಾಗಿದೆ.
ಪತಂಜಲಿಯು ತನ್ನ ಉತ್ಪನ್ನಗಳ ಜೊತೆಗೆ ಆಯುರ್ವೇದದ ಪ್ರಮುಖ ಅಂಶವಾದ ಯೋಗದ ವಿಚಾರವಾಗಿಯೂ ವಿಶ್ವದಾದ್ಯಂತ ಪಾರುಪತ್ಯ ಸಾಧಿಸಿದೆ. ಪತಂಜಲಿಯ ತತ್ವಶಾಸ್ತ್ರವು, ದೇಹದ ಚಟುವಟಿಕೆ, ಮನಸ್ಸು ಹಾಗೂ ಆತ್ಮವನ್ನು ಒಳಗೊಂಡದ್ದಾಗಿದ್ದು, ಶಾಂತಿ ಸಾಧನೆ ಹಾಗೂ ವಿಕಾಸದ ಮೇಲೆ ಕೇಂದ್ರೀಕರಿಸಿದೆ.
ಸಂಶೋಧನಾ ಕೇಂದ್ರಗಳನ್ನು ತೆರೆಯುವ ಹಾಗೂ ಆಯುರ್ವೇದ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಪತಂಜಲಿಯು, ಆಯುರ್ವೇದದ ಸಂರಕ್ಷಣೆ ಹಾಗೂ ಆಧುನೀಕರಣಕ್ಕೆ ಗಣನೀಯ ಕೊಡುಗೆ ನೀಡಿದೆ. ಅದರ ಅಧಿಕೃತ ಆಯುರ್ವೇದ ಉತ್ಪನ್ನಗಳು, ಯೋಗ ಹಾಗೂ ಸಾಂಪ್ರದಾಯಿಕ ಚಿಕಿತ್ಸಾ ವಿಧಾನಗಳು ಒಟ್ಟಾಗಿ, ಸ್ವಾಭಾವಿಕ ಆರೋಗ್ಯದಲ್ಲಿ ಕ್ರಾಂತಿಯನ್ನುಂಟುಮಾಡಿವೆ.
ಪತಂಜಲಿಯು ಆಯುರ್ವೇದವನ್ನು ಆಧುನೀಕರಣಗೊಳಿಸಿದ್ದು, ಲಕ್ಷಾಂತರ ಜನರು ಸಮತೋಲನದಿಂದ ಕೂಡಿದ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಆನಂದಿಸುವಂತೆ ಮಾಡಿದೆ. ಜಗತ್ತು ಸಮಗ್ರ ಜೀವನಕ್ರಮದತ್ತ ಸಾಗುತ್ತಿರುವ ಸಂದರ್ಭದಲ್ಲಿ, ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಯೋಗಕ್ಷೇಮವನ್ನು ಅನುಸರಿಸುವ ನಿಟ್ಟಿನಲ್ಲಿ ಪತಂಜಲಿಯ ಸಿದ್ಧಾಂತಗಳು ಶತಮಾನಗಳವರೆಗೂ ಉಳಿದುಕೊಳ್ಳಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.