ನವದೆಹಲಿ (ಪಿಟಿಐ): ಅನಪೇಕ್ಷಿತ ಕರೆನಿಯಂತ್ರಣಕ್ಕೆ ಸಂಬಂಧಿಸಿದಂತೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮೊಬೈಲ್ ಸೇವಾ ಸಂಸ್ಥೆಗಳಿಗೆ ನೀಡಿದ್ದ ನಾಲ್ಕನೆಯ ಗಡುವು ಕೂಡ ಮುಂದಕ್ಕೆ ಹೋಗುವ ಸಾಧ್ಯತೆಗಳಿವೆ. ಟೆಲಿಮಾರುಕಟ್ಟೆ ವಾಣಿಜ್ಯ ಕರೆಗಳ ನಿಯಂತ್ರಣಕ್ಕೆ, ಮಾರ್ಚ್ 21 ಅಂತಿಮ ಗಡುವು ಎಂದು ನಿಗದಿಪಡಿಸಲಾಗಿತ್ತು.ಆದರೆ, ಸ್ಥಿರ ದೂರವಾಣಿ ವಾಣಿಜ್ಯ ಕರೆಗಳನ್ನು ಗುರುತಿಸಲು ಪ್ರತ್ಯೇಕ ಸಂಖ್ಯಾ ಸರಣಿಯನ್ನು ದೂರಸಂಪರ್ಕ ಇಲಾಖೆ ಇನ್ನೂ ಅಂತಿಮಗೊಳಿಸಿಲ್ಲ. ಇದನ್ನು ಅಂತಿಮಗೊಳಿಸದ ಹೊರತು ಮೊಬೈಲ್ ಸೇವಾ ಸಂಸ್ಥೆಗಳಿಗೆ ಅನಪೇಕ್ಷಿತ ಕರೆ ನಿಷೇಧ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ‘ಟ್ರಾಯ್’ ಅಧ್ಯಕ್ಷ ಜೆ.ಎಸ್ ಶರ್ಮಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.