ADVERTISEMENT

ಇಂದಿನಿಂದ ದ್ರಾಕ್ಷಾರಸ ಉತ್ಸವ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 19:30 IST
Last Updated 7 ಡಿಸೆಂಬರ್ 2017, 19:30 IST
ಕಾರವಾರದ ದ್ರಾಕ್ಷಾರಸ ಉತ್ಸವದಲ್ಲಿ ಸೇರಿರುವ ಜನರು  - ಚಿತ್ರ: ಪಾಂಡುರಂಗ ಹರಿಕಂತ್ರ
ಕಾರವಾರದ ದ್ರಾಕ್ಷಾರಸ ಉತ್ಸವದಲ್ಲಿ ಸೇರಿರುವ ಜನರು - ಚಿತ್ರ: ಪಾಂಡುರಂಗ ಹರಿಕಂತ್ರ   

ಮಂಗಳೂರು: ಕರ್ನಾಟಕ ದ್ರಾಕ್ಷಾರಸ ಮಂಡಳಿ ಮತ್ತು ತೋಟಗಾರಿಕೆ ಇಲಾಖೆ ವತಿಯಿಂದ ಅಂತರರಾಷ್ಟ್ರೀಯ ದ್ರಾಕ್ಷಾರಸ ಉತ್ಸವ ಶುಕ್ರವಾರದಿಂದ ಇದೇ 10ರವರೆಗೆ ನಗರದ ಕದ್ರಿ ಪಾರ್ಕ್‌ನಲ್ಲಿ ನಡೆಯಲಿದೆ.

‘ಅಂತರರಾಷ್ಟ್ರೀಯವಾಗಿ ಗುರುತಿ ಸಿಕೊಂಡ ವೈನ್‌ಗಳ ಪ್ರದರ್ಶನ ಮತ್ತು ಮಾರಾಟ, ವೈನ್‌ ಬಳಕೆ ಉತ್ತೇಜಿಸಲು ವೈನ್‌ ಬಗ್ಗೆ ಅರಿವು ನೀಡುವ ಪ್ರಯತ್ನ, ವೈನ್‌ ತಯಾರಕರಿಗೆ ಬ್ರ್ಯಾಂಡ್‌ಗಳ ಪ್ರದರ್ಶನ ಮತ್ತು ವ್ಯಾಪಾರ ವಹಿವಾಟು ವೃದ್ಧಿಗೆ ಅವಕಾಶ, ದ್ರಾಕ್ಷಿ ಬೆಳೆ ಮತ್ತು ದ್ರಾಕ್ಷಾರಸ ವಿಚಾರ ಸಂಕಿರಣಗಳನ್ನು ಉತ್ಸವದಲ್ಲಿ ಆಯೋಜಿಸಲಾಗಿದೆ’ ಎಂದು ದಾಕ್ಷಾರಸ ಮಂಡಳಿಯ ಪ್ರಧಾನ ವ್ಯವಸ್ಥಾಪಕ ಸರ್ವೇಶ್‌ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯದ ವಿವಿಧೆಡೆಯಿಂದ ಮಾತ್ರವಲ್ಲದೆ ಮಹಾರಾಷ್ಟ್ರದಿಂದಲೂ ಸುಮಾರು 15 ವೈನರಿಗಳು ಭಾಗವಹಿಸಲಿವೆ. ಹಳೆಯ ವೈನ್‌ ಪ್ರದೇಶಗಳಾದ ಯುರೋಪ್‌ನ ವಿವಿಧೆಡೆಗಳ ಮತ್ತು ಹೊಸ ವೈನ್‌ ಪ್ರದೇಶ ಎಂದು ಗುರುತಿಸಿಕೊಂಡ ಆಸ್ಟ್ರೇಲಿಯ, ನ್ಯೂಜಿಲೆಂಡ್‌, ಚಿಲಿ, ಅಮೆರಿಕ ಮತ್ತು ಇತರ ದೇಶಗಳ ವೈನ್‌ಗಳ ಮಾರಾಟ ಮಾಡಲಾಗುವುದು. ಎಲ್ಲ ವೈನ್‌ ಬ್ರಾಂಡ್‌ಗಳ ಮೇಲೆ ಶೇ 10ರಷ್ಟು ರಿಯಾಯ್ತಿ ನೀಡಲಾಗುವುದು’ ಎಂದರು. ದ್ರಾಕ್ಷಾರಸ ಮಂಡಳಿಯ ಅಧ್ಯಕ್ಷ ರವೀಂದ್ರ ಶಂಕರ ಮಿರ್ಜಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಚ್‌. ಆರ್‌. ನಾಯಕ್‌ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.