ADVERTISEMENT

ಇಪಿಎಫ್‌ಒ: ಶಾಶ್ವತ ಖಾತೆ ಸಂಖ್ಯೆಗೆ ಆಧಾರ್‌ ಜೋಡಣೆ

ಪಿಟಿಐ
Published 27 ಫೆಬ್ರುವರಿ 2018, 20:30 IST
Last Updated 27 ಫೆಬ್ರುವರಿ 2018, 20:30 IST

ನವದೆಹಲಿ: ಶಾಶ್ವತ ಖಾತೆ ಸಂಖ್ಯೆಗೆ (ಯುಎಎನ್) ಆಧಾರ್‌ ಜೋಡಿಸುವ ಸೌಲಭ್ಯಕ್ಕೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ ಚಾಲನೆ ನೀಡಿದೆ.

ಭವಿಷ್ಯ ನಿಧಿ ಸಂಘಟನೆಯ ಚಂದಾದಾರರಿಗೆ ಉಮಂಗ್‌ ಆ್ಯಪ್‌ನಲ್ಲಿನ ‘ಇಪಿಎಫ್‌ಒ’ ಸಂಪರ್ಕ ಕೊಂಡಿ ಮೂಲಕ ‘ಯುಎಎನ್  ಮತ್ತು ಆಧಾರ್‌’ ಜೋಡಿಸಲು ಸೌಲಭ್ಯ ಕಲ್ಪಿಸಲಾಗಿದೆ.

‘ಇಪಿಎಫ್‌ಒ’ ಅಂತರ್ಜಾಲ ತಾಣದಲ್ಲಿ ಈಗಾಗಲೇ ಇರುವ ಸೌಲಭ್ಯಕ್ಕೆ ಹೆಚ್ಚುವರಿಯಾಗಿ ಈ ಸೇವೆ ಒದಗಿಸಲಾಗಿದೆ. ಜತೆಗೆ ‘ಇ–ನಾಮಕರಣ’ ಸೇವೆಗೂ ಚಾಲನೆ ನೀಡಲಾಗಿದೆ. ಯುಎಎನ್‌ ಮತ್ತು ಆಧಾರ್‌ ಜೋಡಿಸಿದ ಯಾರೇ ಆಗಲಿ ಈ ಸೌಲಭ್ಯ ಪಡೆಯಬಹುದು. ಈ ನಾಮಕರಣ ಅರ್ಜಿಗೆ ಚಂದಾದಾರರು ‘ಇ ಸಹಿ’ ಹಾಕಬೇಕು. ‘ಇಪಿಎಫ್‌ಒ’ ಈ ಡಿಜಿಟಲ್‌ ಸಹಿಯನ್ನು ಉಚಿತವಾಗಿ ನೀಡಲಿದೆ.

ADVERTISEMENT

ಉಮಂಗ್‌ ತಂತ್ರಾಂಶ: ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆ, ಕಾರ್ಯಕ್ರಮಗಳ ಮಾಹಿತಿ ತಿಳಿಸುವ ತಂತ್ರಾಂಶ ಇದಾಗಿದೆ.  ಒಟ್ಟು 37 ಇಲಾಖೆಗಳ 185ಕ್ಕೂ ಹೆಚ್ಚು ಸೇವೆಗಳನ್ನು ಒದಗಿಸುತ್ತಿದೆ. ಗೂಗಲ್ ಪ್ಲೇಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.