ADVERTISEMENT

ಎಚ್‍ಡಿಎಫ್‍ಸಿ ಲೈಫ್ ಪೆನ್ಶನ್ ಖಾತರಿ ಯೋಜನೆ ಜಾರಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2018, 20:10 IST
Last Updated 25 ಫೆಬ್ರುವರಿ 2018, 20:10 IST

ಬೆಂಗಳೂರು: ಜೀವವಿಮೆ ಕಂಪನಿ ಎಚ್‍ಡಿಎಫ್‍ಸಿ ಲೈಫ್, ‘ಎಚ್‍ಡಿಎಫ್‍ಸಿ ಲೈಫ್ ಪೆನ್ಶನ್ ಗ್ಯಾರಂಟೀಡ್ ಪ್ಲ್ಯಾನ್ (ಪಿಂಚಣಿ) ಪರಿಚಯಿಸಿದೆ.

ವರ್ಷಕ್ಕೆ ಒಂದು ಬಾರಿ ಕಂತು ಪಾವತಿ ಮಾಡುವ ಯೋಜನೆ ಇದಾಗಿದೆ. ಇದೇ ಮೊದಲ ಬಾರಿಗೆ ಇಂತಹ ಯೋಜನೆ ಜಾರಿಗೆ ತರಲಾಗಿದೆ.

ನಿವೃತ್ತಿ ನಂತರ ಆರಾಮದಾಯಕ ಜೀವನ ಸಾಗಿಸಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಖಾತರಿ ಮಾಡಿಕೊಳ್ಳಬೇಕಿದೆ. ಈ ವಿಮೆಯನ್ನು ಪಡೆದುಕೊಂಡರೆ ನಿವೃತ್ತಿ ನಂತರ ನಿಯಮಿತವಾಗಿ ಆದಾಯ ಪಡೆಯಲು ಸಾಧ್ಯವಾಗುತ್ತದೆ. ನಿವೃತ್ತಿ ಅಂಚಿನಲ್ಲಿರುವ ಅಥವಾ ನಿವೃತ್ತಿ ಹೊಂದಿದವರಿಗೆ ಈ ವಿಮೆ ಅತ್ಯಂತ ಸೂಕ್ತವಾಗಿದೆ ಎಂದು ಸಂಸ್ಥೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.