ADVERTISEMENT

`ಎಚ್‌ಎಎಲ್' ಷೇರು ವಿಕ್ರಯ: ನವೆಂಬರ್‌ಗೆ ಐಪಿಒ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2013, 19:59 IST
Last Updated 15 ಏಪ್ರಿಲ್ 2013, 19:59 IST

ನವದೆಹಲಿ(ಪಿಟಿಐ): ದೇಶದ ರಕ್ಷಣಾ ಕ್ಷೇತ್ರದ ಪ್ರತಿಷ್ಠಿತ ಉದ್ಯಮ ಸಂಸ್ಥೆ `ಹಿಂದೂಸ್ತಾನ ಏರೊನಾಟಿಕ್ಸ್ ಲಿ.'(ಎಚ್‌ಎಎಲ್)ನ ಶೇ 10ರಷ್ಟು ಷೇರುಗಳನ್ನು `ಆರಂಭಿಕ ಸಾರ್ವಜನಿಕ ಕೊಡುಗೆ'(ಐಪಿಒ) ಶೈಲಿಯಲ್ಲಿ ಮಾರಾಟ ಮಾಡಿ ಬಂಡವಾಳ ಸಂಗ್ರಹಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

`ಎಚ್‌ಎಎಲ್'ನಲ್ಲಿ ಷೇರುಗಳನ್ನು ನವೆಂಬರ್ ಅಥವಾ ಡಿಸೆಂಬರ್ ವೇಳೆಗೆ ವಿಕ್ರಯಿಸಲಾಗುವುದು. ಈ ಕುರಿತ ಪ್ರಕ್ರಿಯೆ ಸದ್ಯದಲ್ಲಿಯೇ ಆರಂಭಗೊಳ್ಳಲಿದೆ' ಎಂದು ಕೇಂದ್ರ ಹಣಕಾಸು ಸಚಿವಾಲಯದ ಅಧಿಕಾರಿ ಸುದ್ದಿಸಂಸ್ಥೆ ತಿಳಿಸಿದ್ದಾರೆ.

ಷೇರು ವಿಕ್ರಯ ಪ್ರಕ್ರಿಯೆ ನೋಡಿಕೊಳ್ಳಲು ಎಸ್‌ಬಿಐ ಕ್ಯಾಪ್, ಗೋಲ್ಡ್‌ಮನ್ ಸ್ಯಾಚ್ಸ್, ಬರ್ಕ್ಲೀರ್ಸ್ ಮತ್ತು ಆಕ್ಸಿಸ್ ಕ್ಯಾಪಿಟಲ್ ಸಂಸ್ಥೆಗಳನ್ನು ಮರ್ಚೆಂಟ್ ಬ್ಯಾಂಕರ್ಸ್ ಎಂದು ನೇಮಿಸಲಾಗಿದೆ. ಈ ಸಂಸ್ಥೆಗಳು ಸದ್ಯ `ಎಚ್‌ಎಎಲ್'ನ 29 ತಯಾರಿಕಾ ಘಟಕಗಳು, 9 ಜಂಟಿ ಸಹಭಾಗಿತ್ವ ಸಂಸ್ಥೆಗಳು, 10 ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳಲ್ಲಿ ಲೆಕ್ಕಪತ್ರ ಪರಿಶೋಧನೆ ನಡೆಸುತ್ತಿವೆ ಎಂದು ವಿವರಿಸಿದ್ದಾರೆ.

ಎಚ್‌ಎಎಲ್‌ನ ಒಟ್ಟು 1.20 ಕೋಟಿ ಷೇರುಗಳನ್ನು ವಿಕ್ರಯಿಸುವ ಪ್ರಸ್ತಾವನೆಗೆ 2012ರ ನವೆಂಬರ್‌ನಲ್ಲಿಯೇ ಕೇಂದ್ರ ಸಚಿವ ಸಂಪುಟ ಅನುಮೋದನೆ        ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.