ADVERTISEMENT

ಏಪ್ರಿಲ್-ಮೇ ಅವಧಿ ನೇರ ತೆರಿಗೆ ಶೇ 21ರಷ್ಟು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 10 ಜೂನ್ 2013, 19:59 IST
Last Updated 10 ಜೂನ್ 2013, 19:59 IST

ನವದೆಹಲಿ (ಐಎಎನ್‌ಎಸ್): ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಮೇ ಅವಧಿಯಲ್ಲಿ ನೇರ ತೆರಿಗೆ ಸಂಗ್ರಹ ಶೇ 21ರಷ್ಟು ಹೆಚ್ಚಿದ್ದು, ರೂ63,252 ಕೋಟಿಯಷ್ಟಾಗಿದೆ.

ಒಟ್ಟಾರೆ 2013-14ನೇ ಸಾಲಿನಲ್ಲಿ ನೇರ ತೆರಿಗೆ ಸಂಗ್ರಹದಲ್ಲಿ ಶೇ 18ರಷ್ಟು ಹೆಚ್ಚಳ ನಿರೀಕ್ಷಿಸಲಾಗಿದೆ. ಮೊದಲ 2 ತಿಂಗಳಲ್ಲಿ ಆದಾಯ ತೆರಿಗೆ ಸಂಗ್ರಹ ಶೇ 27ರಷ್ಟು ಹೆಚ್ಚಿ ರೂ34,805 ಕೋಟಿಯಷ್ಟಾಗಿದೆ. ರೂ27,957 ಕೋಟಿ ಕಾರ್ಪೊರೇಟ್ ತೆರಿಗೆ  ಸಂಗ್ರಹವಾಗಿದ್ದು, ಶೇ 15ರಷ್ಟು ಪ್ರಗತಿ ಕಂಡಿದೆ. ಆಸ್ತಿ ತೆರಿಗೆ ಸಂಗ್ರಹ ಶೇ 87ರಷ್ಟು ಏರಿಕೆ ಕಂಡಿದ್ದು ರೂ28 ಕೋಟಿಯಷ್ಟಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.