ಬೆಂಗಳೂರು: ಏರ್ಟೆಲ್ನ ಟೆಲಿವಿಷನ್ ಕಾರ್ಯಕ್ರಮಗಳ ನೇರ ಪ್ರಸಾರದ ಮೊಬೈಲ್ ಕಿರುತಂತ್ರಾಂಶ ಏರ್ಟೆಲ್ ಟಿವಿ, ಐಪಿಎಲ್ ಪಂದ್ಯಗಳಿಗೆ ಸಂಬಂಧಿಸಿದಂತೆ ‘ಏರ್ಟೆಲ್ ಟಿವಿ ಫ್ರೀ ಹಿಟ್’ ಗೇಮ್ ಪರಿಚಯಿಸಿದೆ.
ಈ ಗೇಮ್ನಲ್ಲಿ ವಿಜೇತರಾದವರು ಪ್ರತಿ ದಿನ ನಗದು ಬಹುಮಾನ ಗೆಲ್ಲಬಹುದು. ಐಪಿಎಲ್ ಪಂದ್ಯ ಆರಂಭಗೊಳ್ಳುವ ಮುಂಚೆ 7.30ಕ್ಕೆ ಫ್ರೀ ಹಿಟ್ ಲೈವ್ ಮತ್ತು ಪಂದ್ಯ ನಡೆಯುತ್ತಿರುವ ಸಂದರ್ಭದಲ್ಲಿ ‘ನಾನ್ ಲೈವ್’ ಹೀಗೆ ಎರಡು ಬಗೆಯಲ್ಲಿ ಈ ಗೇಮ್ನಲ್ಲಿ ಪಾಲ್ಗೊಳ್ಳಬಹುದು. ‘ಐಪಿಎಲ್ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಗೆಲ್ಲುವ ಅವಕಾಶ ನೀಡಲು ₹ 2 ಕೋಟಿ ತೆಗೆದಿರಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಏರ್ಟೆಲ್ ಟಿವಿ ಆ್ಯಪ್ನ ಹೊಸ ಮಾದರಿ ಡೌನ್ಲೋಡ್ ಮಾಡಿಕೊಳ್ಳಬೇಕು ಎಂದು ಸಂಸ್ಥೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.