
ಪ್ರಜಾವಾಣಿ ವಾರ್ತೆಬೆಂಗಳೂರು: ವಿಮಾನಯಾನ ಸಂಸ್ಥೆ ಏರ್‌ಕೋಸ್ಟಾ, ಚೆನ್ನೈ, ಹೈದರಾಬಾದ್, ಅಹಮದಾಬಾದ್ ಸೇರಿದಂತೆ ಆಯ್ದ ದೇಶೀಯ ಮಾರ್ಗಗಳ ಪ್ರಯಾಣ ದರದಲ್ಲಿ ರಿಯಾಯ್ತಿ ಪ್ರಕಟಿಸಿದೆ. ಮಾ. 24, 25ರಂದು ರಿಯಾಯ್ತಿ ದರದಲ್ಲಿ ಟಿಕೆಟ್ ಖರೀದಿಸಬಹುದು ಹಾಗೂ ಮಾ.30 ಮತ್ತು 31ರಂದು ಪ್ರಯಾಣಿಸಬಹುದು. ಈ ಕೊಡುಗೆ ಸೀಮಿತ. ಸೀಟುಗಳ ಲಭ್ಯತೆ ಆಧರಿಸಿ ಇರುತ್ತದೆ ಎಂದೂ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.