ಮುಂಬೈ: ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಇನ್ಸೂರೆನ್ಸ್ ಕಂಪನಿಯು, ಗ್ರಾಹಕರು ಮೊಬೈಲ್ ಮೂಲಕವೇ ವಿಮೆ ಉತ್ಪನ್ನಗಳ ಸೇವೆ ಪಡೆಯಲು ನೆರವಾಗುವ ಇಂಟರ್‌ನೆಟ್ ತಾಣದ (m.iciciprulife.com ಅಥವಾ www.iciciprulife.com) ಸೇವೆ ಆರಂಭಿಸಿದೆ. ಆನ್‌ಲೈನ್‌ನಲ್ಲಿಯೇ ವಿಮೆ ಕಂತು ಪಾವತಿಸಲೂ ಇದರಿಂದ ಸಾಧ್ಯವಾಗಲಿದೆ.
ಈ ಅಂತರಜಾಲ ತಾಣದ ನೆರವಿನಿಂದ ಗ್ರಾಹಕರು ತಮ್ಮ ಮೊಬೈಲ್ ಫೋನ್‌ಗಳ ಮೂಲಕವೇ ಜೀವ ವಿಮೆಯ ವಿವಿಧ ಬಗೆಯ ಸೇವೆಗಳನ್ನು ಪಡೆಯಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.