ADVERTISEMENT

ಕರ್ಣಾಟಕ ಬ್ಯಾಂಕ್: 83 ಕೋಟಿ ಲಾಭ

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 19:30 IST
Last Updated 20 ಜುಲೈ 2012, 19:30 IST

ಮಂಗಳೂರು: ಕರ್ಣಾಟಕ ಬ್ಯಾಂಕ್ ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ ರೂ 83.44 ಕೋಟಿ  ನಿವ್ವಳ ಲಾಭ ಗಳಿಸಿದ್ದು, ಕಳೆದ ವರ್ಷದ ಇದೇ ಅವಧಿಗೆ (ರೂ 49.78 ಕೋಟಿ) ಹೋಲಿಸಿದಾಗ ಶೇ 67.62ರಷ್ಟು ಪ್ರಗತಿ ಸಾಧಿಸಿದೆ.

ಇದೇ ಅವಧಿಯಲ್ಲಿ ಬ್ಯಾಂಕ್‌ನ ಒಟ್ಟು ವಹಿವಾಟು ರೂ 45,640 ಕೋಟಿಯಿಂದ ್ಙ54,225 ಕೋಟಿಗೆ ಏರಿಕೆ ಕಂಡಿದೆ. ಈ ಮೂಲಕ ಶೇ 19ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಪಿ.ಜಯರಾಂ ಭಟ್ ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಹಣಕಾಸು ವರ್ಷದ ಅಂತ್ಯಕ್ಕೆ 550 ಶಾಖೆಗಳನ್ನು ಮತ್ತು 450 `ಎಟಿಎಂ~ಗಳೊಂದಿಗೆ ಒಟ್ಟು 1 ಸಾವಿರ ಸೇವಾ ಕೇಂದ್ರಗಳನ್ನು ತೆರೆಯುವುದು ಹಾಗೂ 2015ರೊಳಗೆ  ಒಟ್ಟು ವ್ಯವಹಾರವನ್ನು ರೂ1 ಲಕ್ಷ ಕೋಟಿಗೆ ಹಾಗೂ ಗ್ರಾಹಕರ ಸಂಖ್ಯೆಯನ್ನು 1 ಕೋಟಿಗೆ ಹೆಚ್ಚಿಸುವುದು ಬ್ಯಾಂಕ್‌ನ ಗುರಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.