ADVERTISEMENT

ಖಾದ್ಯತೈಲ ಆಮದು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2013, 19:59 IST
Last Updated 12 ಏಪ್ರಿಲ್ 2013, 19:59 IST

ನವದೆಹಲಿ (ಪಿಟಿಐ): ದೇಶದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್‌ನಲ್ಲಿ ಖಾದ್ಯ ತೈಲ ಆಮದು ಶೇ 23ರಷ್ಟು (8.96 ಲಕ್ಷ ಟನ್) ಹೆಚ್ಚಳವಾಗಿದೆ.

`ಖಾದ್ಯತೈಲ ಆಮದು ಪ್ರಮಾಣ 2012ರ ಮಾರ್ಚ್‌ನಲ್ಲಿ 7,27,706 ಟನ್ ಇದ್ದರೆ ಈ ವರ್ಷದ ಮಾರ್ಚ್‌ನಲ್ಲಿ 8,96,714 ಟನ್‌ಗೆ ಹೆಚ್ಚಿದೆ' ಎಂದು `ಸಾಲ್ವೆಂಟ್ ಎರ್ಕ್ಸಾಕ್ಟರ್ಸ್‌ ಅಸೋಸಿಯೇಷನ್' ಶುಕ್ರವಾರ ತಿಳಿಸಿದೆ.

2012ರ ನವೆಂಬರ್‌ನಿಂದ 2013ರ ಮಾರ್ಚ್‌ವರೆಗಿನ ಅವಧಿಯಲ್ಲಿ ಖಾದ್ಯತೈಲ ಆಮದು ಶೇ 22ರಷ್ಟು(46,31,977 ಟನ್) ಹೆಚ್ಚಳವಾಗಿದೆ.

ಒಟ್ಟು ಆಮದಿನಲ್ಲಿ ಶುದ್ಧೀಕರಿಸಿದ ತೈಲ ಪ್ರಮಾಣ ಶೇ 14ರಷ್ಟಿದ್ದರೆ ಕಚ್ಚಾತೈಲ ಪ್ರಮಾಣ ಶೇ 86ರಷ್ಟು ಇದೆ ಎಂದು ವಿವರಿಸಿದೆ.
2012-13ರ ಅವಧಿಯ ಮೊದಲ 5 ತಿಂಗಳಲ್ಲಿ ತಾಳೆ ಎಣ್ಣೆ 38,12,097 ಟನ್ ಆಮದಾಗಿದ್ದರೆ, ಹಿಂದಿನ ವರ್ಷದ ಇದೇ ಅವಧಿಯಲ್ಲಿ 29,46,736 ಟನ್ ಆಮದಾಗಿದ್ದಿತು.

ಏಪ್ರಿಲ್ 1ರ ವೇಳೆಗೆ ವಿವಿಧ ಬಂದರುಗಳಲ್ಲಿ 8.5 ಲಕ್ಷ ಟನ್ ಸೇರಿದಂತೆ 21 ಲಕ್ಷ ಟನ್ ಖಾದ್ಯತೈಲ ದಾಸ್ತಾನಿದೆ. 4 ತಿಂಗಳ ಅವಧಿಯಲ್ಲಿ ಅತ್ಯಧಿಕ ಪ್ರಮಾಣದ ಖಾದ್ಯತೈಲ ಆಮದು ಮಾಡಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.