ADVERTISEMENT

ಚಿನ್ನದ ಬೆಲೆ ರೂ 250 ಏರಿಕೆ-ಬೆಳ್ಳಿ ಇನ್ನಷ್ಟು ಇಳಿಕೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2013, 19:59 IST
Last Updated 18 ಏಪ್ರಿಲ್ 2013, 19:59 IST

ನವದೆಹಲಿ(ಪಿಟಿಐ): ಕಳೆದ ನಾಲ್ಕು ದಿನಗಳಿಂದ ಇಳಿಜಾರಿನಲ್ಲಿ ಸಾಗುತ್ತಿದ್ದ ಬಂಗಾರದ ಬೆಲೆ ಕುಸಿತಕ್ಕೆ ಗುರುವಾರ ದಿಢೀರ್ ತಡೆ ಬಿದ್ದಿತು. ಅಲ್ಲದೆ, ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆರೂ250ರಷ್ಟು ಹೆಚ್ಚಳ ಕಂಡಿತು.

ಆದರೆ, ಬೆಳ್ಳಿ ಧಾರಣೆ ಮಾತ್ರ ಮತ್ತೆ ಕುಸಿತ ಮುಂದುವರಿಸಿದ್ದು, ಕೆ.ಜಿ.ಗೆರೂ300ರಷ್ಟು ಬೆಲೆ ಕಳೆದುಕೊಂಡಿತು. ಗುರುವಾರ ಕೆ.ಜಿ. ಸಿದ್ಧ ಬೆಳ್ಳಿ ರೂ 45,400ರಲ್ಲಿ ಮಾರಾಟವಾಯಿತು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಧಾರಣೆಯಲ್ಲಿ ಬುಧವಾರ ಸಂಜೆ ಏರಿಕೆಯಾದ ಹಿನ್ನೆಲೆಯಲ್ಲಿ ದೇಶೀಯ ಚಿನಿವಾರ ಪೇಟೆಯಲ್ಲಿ ಅದರ ಪ್ರಭಾವ ಕೆಲಸ ಮಾಡಿತು. ಪರಿಣಾಮ ನವದೆಹಲಿಯಲ್ಲಿ ಅಪರಂಜಿ ಚಿನ್ನ 10 ಗ್ರಾಂಗೆರೂ26,600ಕ್ಕೂ, ಸ್ಟ್ಯಾಂಡರ್ಡ್ ಚಿನ್ನರೂ26,400ಕ್ಕೂ ಹೆಚ್ಚಳವಾಯಿತು.

ಮುಂಬೈನಲ್ಲಿಯೂ 10 ಗ್ರಾಂ ಅಪರಂಜಿ ಚಿನ್ನರೂ240ರಷ್ಟು ಬೆಲೆ ಹೆಚ್ಚಿಸಿಕೊಂಡುರೂ25,820ಕ್ಕೂ, ಸ್ಟ್ಯಾಂಡರ್ಡ್ ಚಿನ್ನರೂ25,920ಕ್ಕೂ ಏರಿಕೆ ಕಂಡಿತು.
ಇನ್ನೊಂದೆಡೆ ಬಹುಬಗೆ ಸರಕು ವಿನಿಮಯ ಮಾರುಕಟ್ಟೆ(ಎಂಸಿಎಕ್ಸ್)ನಲ್ಲಿ ವಾಯಿದೆ ಪೇಟೆ ವಹಿವಾಟಿನಲ್ಲಿ ಜೂನ್ ವಿತರಣೆ ಚಿನ್ನರೂ170ರಷ್ಟು ಬೆಲೆ ಏರಿಕೆ ಕಂಡಿತು. 10 ಗ್ರಾಂಗೆ ಗರಿಷ್ಠರೂ25,849 ಮತ್ತು ಕನಿಷ್ಠರೂ25,333ರಷ್ಟು ಬೆಲೆ ಪಡೆದುಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.