ADVERTISEMENT

ಚಿನ್ನ,ಬೆಳ್ಳಿ ಬೆಲೆ ಅಲ್ಪ ಕುಸಿತ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 19:30 IST
Last Updated 18 ಅಕ್ಟೋಬರ್ 2011, 19:30 IST

ಮುಂಬೈ (ಪಿಟಿಐ): ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿದಿರುವುದು ಮಂಗಳವಾರ ಇಲ್ಲಿಯ ಚಿನಿವಾರ ಪೇಟೆಯಲ್ಲಿಯೂ ಪ್ರತಿಫಲನಗೊಂಡಿತು.

ಹೂಡಿಕೆದಾರರು ಮತ್ತು ಸಂಗ್ರಹಕಾರರ ಮಾರಾಟ ಭರಾಟೆ ಫಲವಾಗಿ ಚಿನ್ನ ಮತ್ತು ಊಹಾತ್ಮಕ ಮಾರಾಟ ಹಾಗೂ ಕೈಗಾರಿಕಾ ವಲಯದ  ಬೇಡಿಕೆ ಕುಸಿತ ಕಾರಣಕ್ಕೆ ಬೆಳ್ಳಿ ಬೆಲೆ ಇಳಿದವು.

ಸ್ಟ್ಯಾಂಡರ್ಡ್ ಚಿನ್ನ ಪ್ರತಿ 10 ಗ್ರಾಂಗಳಿಗೆ ರೂ150ರಂತೆ ಕಡಿಮೆಯಾಗಿ 26,590ಕ್ಕೆ, ಅಪರಂಜಿ ಚಿನ್ನ ರೂ145ರಂತೆ ಕಡಿಮೆಯಾಗಿ ರೂ26,715ಕ್ಕೆ ಮತ್ತು ಬೆಳ್ಳಿ ಪ್ರತಿ ಕೆಜಿಗೆ ರೂ1,055 ರಷ್ಟು ಕಡಿಮೆಯಾಗಿ ರೂ 52,530ಕ್ಕೆ ಇಳಿಯಿತು.

ಐರೋಪ್ಯ ಒಕ್ಕೂಟದ ಬಿಕ್ಕಟ್ಟು ಇನ್ನಷ್ಟು ತೀವ್ರಗೊಳ್ಳುವ ಕಾರಣಕ್ಕೆ ಡಾಲರ್ ಮೌಲ್ಯವರ್ಧನೆಯಾಗಿರುವುದು ಮತ್ತು ಚೀನಾದ ಆರ್ಥಿಕ ವೃದ್ಧಿ ದರ ಕಡಿಮೆಯಾದ ಕಾರಣಕ್ಕೆ ಲಂಡನ್‌ನಲ್ಲಿ ಚಿನ್ನದ ಬೆಲೆ ಕುಸಿದಿದೆ. ನ್ಯೂಯಾರ್ಕ್‌ನಲ್ಲಿಯೂ ಚಿನ್ನದ ಬೆಲೆ ಸತತ 2ನೇ ದಿನವೂ ಕಡಿಮೆಯಾಗಿದ್ದು, ಪ್ರತಿ ಔನ್ಸ್‌ಗೆ 36 ಡಾಲರ್‌ನಷ್ಟು ಕುಸಿತ ಕಂಡಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.