ADVERTISEMENT

ಚಿನ್ನ ಆಮದು ಸುಂಕ ಏರಿಕೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2013, 19:59 IST
Last Updated 6 ಜೂನ್ 2013, 19:59 IST
ಹೈದರಾಬಾದ್‌ನಲ್ಲಿ ಗುರುವಾರ ವಜ್ರಾಭರಣ ಪ್ರದರ್ಶನದಲ್ಲಿ ಹೊಸ ವಿನ್ಯಾಸದ ಆಭರಣದೊಂದಿಗೆ ಚಿತ್ರನಟಿ ಪ್ರಿಯಾಂಕಾ ರಾವ್ ಮಂದಸ್ಮಿತ 	-ಪಿಟಿಐ ಚಿತ್ರ
ಹೈದರಾಬಾದ್‌ನಲ್ಲಿ ಗುರುವಾರ ವಜ್ರಾಭರಣ ಪ್ರದರ್ಶನದಲ್ಲಿ ಹೊಸ ವಿನ್ಯಾಸದ ಆಭರಣದೊಂದಿಗೆ ಚಿತ್ರನಟಿ ಪ್ರಿಯಾಂಕಾ ರಾವ್ ಮಂದಸ್ಮಿತ -ಪಿಟಿಐ ಚಿತ್ರ   

ನವದೆಹಲಿ(ಪಿಟಿಐ): ಚಿನ್ನದ ಆಮದು ತಗ್ಗಿಸುವ ಸಲುವಾಗಿ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿರುವ ಕೇಂದ್ರ ಸರ್ಕಾರ, ಈಗ ಮತ್ತೆ ಬಂಗಾರ ಆಮದು ಸುಂಕವನ್ನು ಶೇ 2ರಷ್ಟು ಏರಿಸಿದೆ.  ಅಷ್ಟೇ ಅಲ್ಲ, ಪ್ಲಾಟಿನಂ ಆಮದು ಸುಂಕದಲ್ಲೂ ಏರಿಕೆ ಮಾಡಿದೆ. ಇದರಿಂದ ಚಿನ್ನ ಮತ್ತು ಪ್ಲಾಟಿನಂ ಆಮದು ಸುಂಕದ ಪ್ರಮಾಣ ಶೇ 8ಕ್ಕೇರಿದೆ.

ಒಂದೆಡೆ ಹೆಚ್ಚುತ್ತಿರುವಂತೆ ಇನ್ನೊಂದೆಡೆ ಆಮದು-ರಫ್ತು ಕೊರತೆ ಅಂತರವೂ ವಿಸ್ತರಿಸುತ್ತಿರುವುದು ಕೇಂದ್ರ ಸರ್ಕಾರಕ್ಕೆ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಭಾರಿ ತಲೆನೋವಾಗಿ ಪರಿಣಮಿಸಿತ್ತು. ಹಾಗಾಗಿಯೇ ಸರ್ಕಾರ ಮತ್ತೆ ಕಠಿಣ ಕ್ರಮ ಕೈಗೊಂಡಿದೆ.
ಸುಂಕ ಏರಿಕೆ ಜೂನ್ 5ರಿಂದಲೇ ಜಾರಿಗೆ ಬಂದಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಪ್ರಕಟಿಸಿದೆ.

ಕಳೆದ ಆರು ತಿಂಗಳಲ್ಲಿ ಚಿನ್ನದ ಆಮದು ಸುಂಕ ಏರಿಕೆಯಾಗುತ್ತಿರುವುದು ಇದು ಎರಡನೇ ಬಾರಿ. ಮೇ ತಿಂಗಳಲ್ಲಿ ಬಂಗಾರದ ಆಮದು ಪ್ರಮಾಣ 162 ಟನ್ ಮುಟ್ಟಿದ್ದರಿಂದ ಸುಂಕ ಏರಿಸುವುದು ಅನಿವಾರ್ಯವಾಗಿದೆ ಎಂದು ಸಚಿವಾಲಯ ಹೇಳಿದೆ.

`ಚಿನ್ನಕ್ಕೆ ಪ್ರೋತ್ಸಾಹ ಸಲ್ಲ'
ಮುಂಬೈನಲ್ಲಿ ಗುರುವಾರ ಭಾರತೀಯ ಬ್ಯಾಂಕರ್ಸ್ ಅಸೋಸಿಯೇಷನ್(ಐಬಿಎ) ವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಿದ್ದ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರು, ಗ್ರಾಹಕರು ಚಿನ್ನ ಖರೀದಿಸಲು ಪ್ರೋತ್ಸಾಹಿಸದಿರಿ ಎಂದು ಬ್ಯಾಂಕ್ ಅಧಿಕಾರಿಗಳ ಗಮನ ಸೆಳೆದರು.

ಚಿನ್ನದಲ್ಲಿ ಹಣ ತೊಡಗಿಸಲು ಗ್ರಾಹಕರು ಆಸಕ್ತಿ ತೋರಿದರೆ ಅವರಿಗೆ ತಿಳಿಹೇಳಬೇಕು. ಎಲ್ಲ ಶಾಖೆಗಳಲ್ಲಿ ಈ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಬ್ಯಾಂಕ್‌ಗಳ ಪ್ರಮುಖರು ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.