ADVERTISEMENT

ಚಿನ್ನ ದರ ರೂ.475 ಏರಿಕೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2013, 19:59 IST
Last Updated 6 ಜೂನ್ 2013, 19:59 IST

ನವದೆಹಲಿ/ಮುಂಬೈ(ಪಿಟಿಐ): ಚಿನ್ನ ಖರೀದಿ ಕನಸು ಕಾಣುತ್ತಿದ್ದವರಿಗೆ ಕಹಿ ಸುದ್ದಿ. 10 ಗ್ರಾಂ ಅಪರಂಜಿ ಚಿನ್ನ ಮುಂಬೈನಲ್ಲಿ ರೂ.465ರಿಂದ 475ರಷ್ಟು ಮತ್ತು ನವದೆಹಲಿಯಲ್ಲಿ ರೂ.430ರಷ್ಟು ತುಟ್ಟಿಯಾಗಿದೆ. ಮುಂಬೈ ಧಾರಣೆ 2 ತಿಂಗಳಲ್ಲೇ ಗರಿಷ್ಠ, ನವದೆಹಲಿಯಲ್ಲಿನ ಬೆಲೆ 5 ವಾರಗಳಲ್ಲೇ ಹೆಚ್ಚಿನದ್ದಾಗಿದೆ.

ಮುಂಬೈನಲ್ಲಿ 10 ಗ್ರಾಂ ಸ್ಟ್ಯಾಂಡರ್ಡ್ ಚಿನ್ನ ರೂ.475ರಷ್ಟು ಬೆಲೆ ಹೆಚ್ಚಿಸಿಕೊಂಡು ರೂ.27,705ಕ್ಕೂ, ಅಪರಂಜಿ ಚಿನ್ನ ರೂ.465ರಷ್ಟು ಮೌಲ್ಯ ಏರಿಸಿಕೊಂಡು ರೂ.27,570ಕ್ಕೂ ಹೆಚ್ಚಳ ಕಂಡಿತು.

ನವದೆಹಲಿಯಲ್ಲಿ ರೂ.430 ಏರಿಕೆ ಕಂಡ 10 ಗ್ರಾಂ ಅಪರಂಜಿ ಚಿನ್ನ ರೂ.28,090ಕ್ಕೂ, ಸ್ಟ್ಯಾಂಡರ್ಡ್ ಚಿನ್ನ ರೂ.27,890ಕ್ಕೂ ಬೆಲೆ ಹೆಚ್ಚಿಸಿಕೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.