ADVERTISEMENT

ಜಿಎಸ್‌ಟಿ ಪ್ರಾಧಿಕಾರ ರಾಜ್ಯಗಳಿಗೆ ಸೂಚನೆ

ಪಿಟಿಐ
Published 29 ಮೇ 2018, 19:30 IST
Last Updated 29 ಮೇ 2018, 19:30 IST

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಗೆ (ಜಿಎಸ್‌ಟಿ) ಸಂಬಂಧಿಸಿದಂತೆ ಮೇಲ್ಮನವಿ ಪ್ರಾಧಿಕಾರ ರಚಿಸಲು ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಜಿಎಸ್‌ಟಿ ಮಂಡಳಿಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕೇಳಿಕೊಂಡಿದೆ.

ಅಥಾರಿಟಿ ಫಾರ್‌ ಅಡ್ವಾನ್ಸ್‌ ರೂಲಿಂಗ್ಸ್‌ನ (ಎಎಆರ್‌) ಆದೇಶಗಳ ವಿರುದ್ಧ ಬಾಧಿತ ಸಂಸ್ಥೆಗಳು ಮೇಲ್ಮನವಿ ಸಲ್ಲಿಸಲು ಈ ಪ್ರಾಧಿಕಾರಗಳನ್ನು ತ್ವರಿತವಾಗಿ ರಚಿಸಬೇಕಾಗಿದೆ.

ವಿವಿಧ ರಾಜ್ಯಗಳಲ್ಲಿನ ‘ಎಎಆರ್‌’ಗಳು ಮಾರ್ಚ್‌ ತಿಂಗಳಿನಿಂದೀಚೆಗೆ ಆದೇಶ ನೀಡಲು ಆರಂಭಿಸಿವೆ. ಹೀಗಾಗಿ ಮೇಲ್ಮನವಿ ಪ್ರಾಧಿಕಾರ ರಚಿಸುವುದು ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಅನಿವಾರ್ಯವಾಗಿದೆ. ಮೇಲ್ಮನವಿ ಪ್ರಾಧಿಕಾರಗಳಿಗೆ ಸದಸ್ಯರನ್ನು ನಾಮಕರಣ ಮಾಡಬೇಕೆಂದು ಸೂಚಿಸಿ ಜಿಎಸ್‌ಟಿ ಮಂಡಳಿಯು ರಾಜ್ಯ ಸರ್ಕಾರಗಳು, ಪರೋಕ್ಷ ತೆರಿಗೆ ಹಾಗೂ ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಗೆ ಪತ್ರ ಬರೆದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.