ADVERTISEMENT

ಟಿಸಿಎಸ್:ಲಾಭ ರೂ. 2932 ಕೋಟಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2012, 19:30 IST
Last Updated 23 ಏಪ್ರಿಲ್ 2012, 19:30 IST

ಮುಂಬೈ(ಪಿಟಿಐ): ದೇಶದ ಅತಿದೊಡ್ಡ ಸಾಫ್ಟ್‌ವೇರ್ ಕಂಪನಿ `ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್~(ಟಿಸಿಎಸ್) ಮಾರ್ಚ್ 31ಕ್ಕೆ ಕೊನೆಗೊಂಡ 2011-12ರ ನಾಲ್ಕನೇ ತ್ರೈಮಾಸಿಕದಲ್ಲಿ 2,932.40 ಕೋಟಿ (ಶೇ. 22.6ರಷ್ಟು ಅಧಿಕ) ನಿವ್ವಳ ಲಾಭ ಗಳಿಸಿದೆ. 2010-11ರ ಇದೇ ಅವಧಿಯಲ್ಲಿ ಕಂಪನಿ 2392.70 ಕೋಟಿ ಲಾಭದಲ್ಲಿತ್ತು.

ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ವರಮಾನ ಶೇ. 30.5ರಷ್ಟು ಹೆಚ್ಚಳವಾಗಿದ್ದು, ರೂ. 13,259.30 ಕೋಟಿಗೆ ಏರಿದೆ.ನಾಲ್ಕನೇ ತ್ರೈಮಾಸಿಕದಲ್ಲಿನ ಉತ್ತಮ ಫಲಿತಾಂಶ ಫಲವಾಗಿ ಟಿಸಿಎಸ್ 2011-12ನೇ ಹಣಕಾಸು ವರ್ಷದಲ್ಲಿ ಒಟ್ಟು 10,638.20 ಕೋಟಿ ನಿವ್ವಳ ಲಾಭ ಗಳಿಸಿದ್ದು, ಶೇ. 21.90ರಷ್ಟು ಪ್ರಗತಿ ದಾಖಲಿಸಿದೆ. ಜತೆಗೆ ಕಂಪನಿಯ ವರಮಾನವೂ 48,893.80 ಕೋಟಿಗೆ (ಶೇ. 31ರಷ್ಟು) ಹೆಚ್ಚಳವಾಗಿದೆ ಎಂದು ಟಿಸಿಎಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ-ವ್ಯವಸ್ಥಾಪಕ ನಿರ್ದೇಶಕ ಎನ್.ಚಂದ್ರಶೇಖರನ್ ಸೋಮವಾರ ಹರ್ಷ ವ್ಯಕ್ತಪಡಿಸಿದರು.

2012ರ ಜನವರಿ-ಮಾರ್ಚ್ ಅವಧಿಯಲ್ಲಿ ಹೊಸದಾಗಿ 11,832 ನೌಕರರನ್ನು ಕಂಪನಿ ನೇಮಿಸಿಕೊಂಡಿದ್ದು, ಒಟ್ಟಾರೆ ಸಿಬ್ಬಂದಿ ಸಾಮರ್ಥ್ಯವನ್ನು 2.38 ಲಕ್ಷಕ್ಕೆ ಹೆಚ್ಚಿಸಿಕೊಂಡಿದೆ ಎಂದರು.ಟಿಸಿಎಸ್ ರೂ. 1 ಮುಖಬೆಲೆಯ ಪ್ರತಿ ಷೇರಿಗೆ ರೂ. 8ರಷ್ಟು ಅಂತಿಮ ಹಾಗೂ ವಿಶೇಷ ಲಾಭಾಂಶವನ್ನೂ ಘೋಷಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.