ADVERTISEMENT

ಟಿಸಿಎಸ್ ಲಾಭ ರೂ. 3,550 ಕೋಟಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2013, 19:59 IST
Last Updated 14 ಜನವರಿ 2013, 19:59 IST
ಟಿಸಿಎಸ್ ಲಾಭ ರೂ. 3,550 ಕೋಟಿ
ಟಿಸಿಎಸ್ ಲಾಭ ರೂ. 3,550 ಕೋಟಿ   

ಮುಂಬೈ (ಪಿಟಿಐ): ದೇಶದ ಅತಿ ದೊಡ್ಡ ಐ.ಟಿ ಸೇವಾ ಸಂಸ್ಥೆ `ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್'(ಟಿಸಿಎಸ್) ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿರೂ.3,550 ಕೋಟಿ ನಿವ್ವಳ ಲಾಭ ಗಳಿಸಿ, ಶೇ 26.7ರಷ್ಟು ಪ್ರಗತಿ ದಾಖಲಿಸಿದೆ. ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಕಂಪೆನಿಯ ನಿವ್ವಳ ಲಾಭರೂ.2,803 ಕೋಟಿ ಇದ್ದಿತು.

ಡಿ. 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪೆನಿಯ ಒಟ್ಟು ವರಮಾನ ಶೇ 21.7ರಷ್ಟು ಹೆಚ್ಚಿ,ರೂ.16,070 ಕೋಟಿಗೆ ಏರಿದೆ. 2011-12ರ ಮೂರನೇ ತ್ರೈಮಾಸಿಕದ ವರಮಾನರೂ.13,204 ಕೋಟಿಯಷ್ಟಿದ್ದಿತು.

`ಉತ್ಪಾದನೆ ಮತ್ತು ಆವಿಷ್ಕಾರಗಳಿಗೆ ಆದ್ಯತೆ ನೀಡಿದ ಪರಿಣಾಮ ವರಮಾನ ಮತ್ತು ನಿವ್ವಳ ಲಾಭ ವಿಭಾಗಗಳಲ್ಲಿ ಅತ್ಯುತ್ತಮ ಪ್ರಗತಿಯಾಗಿದೆ' ಎಂದು `ಟಿಸಿಎಸ್' ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಚಂದ್ರಶೇಖರನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

`ಮೂರನೇ ತ್ರೈಮಾಸಿಕದಲ್ಲಿ ಒಟ್ಟಾರೆ 9,561 ಉದ್ಯೋಗಿಗಳು ಕಂಪೆನಿಗೆ ಸೇರಿದಂತಾಗಿದೆ. ಒಟ್ಟು ನೌಕರರ ಸಂಖ್ಯೆ 2,63,637ಕ್ಕೇರಿದೆ.  ಮೂರೂ ತ್ರೈಮಾಸಿಕಗಳಲ್ಲಿ ಒಟ್ಟು 50 ಸಾವಿರ ಅಭ್ಯರ್ಥಿಗಳನ್ನು ನೇಮಿಸಿಕೊಂಡಂತಾಗಿದೆ' ಎಂದು `ಟಿಸಿಎಸ್' ಉಪಾಧ್ಯಕ್ಷ ಅಜಯ್ ಮಖರ್ಜಿ ವಿವರ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.