ADVERTISEMENT

ತೆರಿಗೆ ಹೆಚ್ಚಳಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 19:30 IST
Last Updated 18 ಫೆಬ್ರುವರಿ 2012, 19:30 IST

ಚೆನ್ನೈ (ಐಎಎನ್‌ಎಸ್): ಡೀಸೆಲ್ ಚಾಲಿತ ವಾಹನಗಳ ತೆರಿಗೆ ಹೆಚ್ಚಿಸುವುದರ ಬದಲು ಡೀಸೆಲ್ ದರವನ್ನೇ ಸ್ವಲ್ಪ ಹೆಚ್ಚಿಸುವುದು ಸದ್ಯದ ಪರಿಸ್ಥಿತಿಯಲ್ಲಿ ಸೂಕ್ತ ಕ್ರಮ ಎಂದು ಕಾರು ತಯಾರಿಕೆ ಕಂಪೆನಿ ಫೋರ್ಡ್  ಇಂಡಿಯಾ ಅಭಿಪ್ರಾಯಪಟ್ಟಿದೆ.

`ಡೀಸೆಲ್ ಚಾಲಿತ ಕಾರುಗಳ ಮೇಲೆ `ಸೆಸ್~ ಹೇರಲು  ಸರ್ಕಾರ ಚಿಂತಿಸುತ್ತಿದೆ. ಇದರಿಂದ ವಾಹನದ ಬೆಲೆ  ್ಙ80 ಸಾವಿರದಷ್ಟು ಹೆಚ್ಚಲಿದೆ.ಇದರ ಬದಲಿಗೆ ಸರ್ಕಾರ ಡೀಸೆಲ್ ದರವನ್ನು 75 ಪೈಸೆಗಳಷ್ಟು ಹೆಚ್ಚಿಸಿದರೆ ವರಮಾನ ನಷ್ಟ ತುಂಬಿಕೊಳ್ಳಬಹುದು ಎಂದು ಫೋರ್ಡ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮೈಕಲ್ ಬೊನ್ಯಾಹಂ ಅಭಿಪ್ರಾಯಪಟ್ಟಿದ್ದಾರೆ.

ಡೀಸೆಲ್ ಎಂಜಿನ್ ತಯಾರಿಕೆ ಘಟಕದ ಸಾವುರ್ಥ್ಯ ಹೆಚ್ಚಳ ಸೇರಿದಂತೆ ಇತರೆ  ಯೋಜನೆಗಳಿಗಾಗಿ ಕಂಪೆನಿ ್ಙ72 ಕೋಟಿಗಳಷ್ಟು ಬಂಡವಾಳ ಹೂಡಿಕೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.