ADVERTISEMENT

ದಾಖಲೆ ಮಟ್ಟದಿಂದ ಕುಸಿದ ಸೂಚ್ಯಂಕ

ಪಿಟಿಐ
Published 27 ಡಿಸೆಂಬರ್ 2017, 19:30 IST
Last Updated 27 ಡಿಸೆಂಬರ್ 2017, 19:30 IST

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಬುಧವಾರದ ವಹಿವಾಟಿನಲ್ಲಿ ಮಂಗಳವಾರದ ದಾಖಲೆ ಮಟ್ಟದಿಂದ ಕೆಳಗೆ ಕುಸಿಯಿತು.

ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವುದು ಮತ್ತು ವಿದೇಶಿ ಹೂಡಿಕೆಯ ಹೊರ ಹರಿವು ಪೇಟೆಯಲ್ಲಿ ಕೆಲಮಟ್ಟಿಗೆ ಆತಂಕ ಸೃಷ್ಟಿಸಿದೆ. ಗರಿಷ್ಠ ಮಟ್ಟದಲ್ಲಿನ ಮಾರಾಟದ ಲಾಭ ಮಾಡಿಕೊಳ್ಳುವ ಹೂಡಿಕೆದಾರರ ಪ್ರವೃತ್ತಿಯಿಂದಾಗಿ ಷೇರು ಬೆಲೆಗಳು ಕುಸಿತ ಕಂಡವು.

ಸಂವೇದಿ ಸೂಚ್ಯಂಕವು 98.80 ಅಂಶ (ಶೇ 0.29) ಕಳೆದುಕೊಂಡು 33,911.81 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ಎರಡು ವಹಿವಾಟಿನ ಅವಧಿಯಲ್ಲಿ ಸೂಚ್ಯಂಕ 254 ಅಂಶಗಳಷ್ಟು ಏರಿಕೆ ಕಂಡಿದೆ. ಜಾಗತಿಕ ಪೇಟೆಯಲ್ಲಿ ಕಚ್ಚಾ ತೈಲದ ಬೆಲೆಯು ಪ್ರತಿ ಡಾಲರ್‌ಗೆ 66.73 ಡಾಲರ್‌ಗೆ ತಲುಪಿರುವುದು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.