ADVERTISEMENT

ದೀರ್ಘಾವಧಿ ಹೂಡಿಕೆ: ಹೆಚ್ಚು ಸುಭದ್ರ

​ಪ್ರಜಾವಾಣಿ ವಾರ್ತೆ
Published 21 ಜೂನ್ 2011, 19:30 IST
Last Updated 21 ಜೂನ್ 2011, 19:30 IST
ದೀರ್ಘಾವಧಿ ಹೂಡಿಕೆ: ಹೆಚ್ಚು ಸುಭದ್ರ
ದೀರ್ಘಾವಧಿ ಹೂಡಿಕೆ: ಹೆಚ್ಚು ಸುಭದ್ರ   

ನಮ್ಮ ಕೌಟುಂಬಿಕ ವ್ಯವಸ್ಥೆಯಲ್ಲಿ ಉಳಿತಾಯದ ಪ್ರಮಾಣ ಅಂದಾಜು ಶೇ 24ರಷ್ಟಿದೆ. ಷೇರು ವಹಿವಾಟಿನತ್ತಲೂ ಉಳಿತಾಯದ ಹಣ ಹರಿದು ಬರುತ್ತಿದ್ದರೂ ಅದರ ಪ್ರಮಾಣ ಕಡಿಮೆ ಇದೆ. 2001ರ ಹಣಕಾಸು ವರ್ಷದಿಂದ ಇಲ್ಲಿಯವರೆಗೂ ಷೇರುಗಳಲ್ಲಿ ಹೂಡಿಕೆಯಾಗುತ್ತಿರುವ ಪ್ರಮಾಣ ಒಟ್ಟು ಉಳಿತಾಯದ ಶೇ 3.3ರಷ್ಟು ಮಾತ್ರ.

ಇದು, ಅನ್ಯ ರಾಷ್ಟ್ರಗಳಿಗೆ ಹೋಲಿಸಿದರೆ ತೀರ ಕಡಿಮೆ. ಆದರೆ, ಬದಲಾದ ಆದಾಯ ಪ್ರಮಾಣ, ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯು ಉಳಿತಾಯದ ಬಗ್ಗೆ ಹೊಸ ಭರವಸೆಗಳನ್ನು ಮೂಡಿಸಿದೆ. ಉಳಿತಾಯದ ಹಣವನ್ನು ಹೂಡಿಕೆಯತ್ತ ಆಕರ್ಷಿಸುವುದು ಸದ್ಯದ  ಅಗತ್ಯವಾಗಿದೆ.

ಸರಕಗಳ ಬೇಡಿಕೆ ಮತ್ತು ಬಳಕೆಯು ಹೆಚ್ಚುತ್ತಿದ್ದು, ಹಣಕಾಸು ವಲಯವು ಸುಭದ್ರಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ 3 ರಿಂದ 5 ವರ್ಷಗಳ ಸುದೀರ್ಘ ಅವಧಿಯಲ್ಲಿ  ಬಂಡವಾಳ ಹೂಡಿಕೆ ಮಾಡುವಂತೆ ಉತ್ತೇಜನ  ನೀಡಬೇಕಾದ ಅಗತ್ಯವಿದೆ.
 
ಭದ್ರತೆ ಮತ್ತು ಹೆಚ್ಚಿನ ಆದಾಯ ನಿರೀಕ್ಷಿಸುವ ಹೂಡಿಕೆದಾರರಿಗೆ ದೊಡ್ಡ ಪ್ರಮಾಣದ ನಿಧಿಗಳಲ್ಲಿ (ಲಾರ್ಜ್ ಕ್ಯಾಪ್ ಫಂಡ್)  ಹೂಡಿಕೆ ಮಾಡುವುದು ಸೂಕ್ತ. ಅಲ್ಪಾವಧಿಯ ಮಾರುಕಟ್ಟೆಯಲ್ಲಿ ಕನಿಷ್ಠ ಪ್ರಮಾಣದ ಸ್ಥಿರತೆ ಇರುವುದೇ ಇದಕ್ಕೆ ಕಾರಣ.  ದೇಶಿ ಮಾರುಕಟ್ಟೆಗೆ ಬರುತ್ತಿರುವ ಹಣದ ಹರಿವು ಗಮನಿಸಿದರೆ ದೀರ್ಘಾವಧಿ ಹೂಡಿಕೆ ಹೆಚ್ಚು ಸುಭದ್ರ.

ಬಂಡವಾಳ ಹೂಡಿಕೆದಾರರು ಮ್ಯೂಚುವಲ್ ಫಂಡ್‌ಗಳ ಮೂಲಕ ಪ್ರಮುಖ ಷೇರುಗಳಲ್ಲಿ ಹಣ  ಹೂಡಿಕೆ ಮಾಡುವುದು ಹೆಚ್ಚು ಸುರಕ್ಷಿತ.  ಐಸಿಐಸಿಐ ಪ್ರುಡೆನ್ಷಿಯಲ್ ಫೋಕಸ್ಡ್ ಬ್ಲೂಚಿಪ್ ಈಕ್ವಿಟಿ ಅಂತಹ ವ್ಯವಸ್ಥಿತ ಹೂಡಿಕೆಯಲ್ಲಿ ಹೂಡುವುದರಿಂದ ಯೂನಿಟ್‌ದಾರರಿಗೆ ಹೆಚ್ಚಿನ ಲಾಭ ತರುವ ನಿಟ್ಟಿನಲ್ಲಿ ಹೂಡಿಕೆಯಾಗಲಿದೆ.

ಐಫ್ರು ಫೋಕಸ್ಡ್‌ಬ್ಲೂಚಿಪ್ ಫಂಡ್ ಅತ್ಯುತ್ತಮ ಸಾಧನೆಯನ್ನು ಕಳೆದ ಮೂರು ವರ್ಷಗಳ ಅವಧಿಯಲ್ಲಿ ಹೊಂದಿದೆ. ಆಕರ್ಷಕ ಮೌಲ್ಯ ವೃದ್ಧಿಯಾಗುವಂತೆ ದರ ಪರಿಷ್ಕರಣೆ ಆಗಲಿದ್ದು, ಲಾರ್ಜ್ ಕ್ಯಾಪ್ ಪ್ರಗತಿ ಆಧಾರಿತ ಕ್ಷೇತ್ರಗಳಲ್ಲಿ ಕೇಂದ್ರೀಕರಿಸಲಿದೆ.

ಸುಮಾರು 20 ಷೇರುಗಳ ಮೇಲೆ ಗರಿಷ್ಠ ಲಾಭವನ್ನು ನಿರೀಕ್ಷಿಸಿ ಹೂಡಿಕೆ ಮಾಡುವ ನೀತಿಯನ್ನು ಈ ಫಂಡ್ ಆದರಿಸಿದೆ.  ಅಂದರೆ, ಒಂದು ಮಟ್ಟದ ನಂತರದ ಅಪಾಯ ತಡೆಯುವುದು, ಅಧಿಕ ಲಾಭ ಪಡೆಯುವ ಸಂಗತಿ ಆಧರಿಸಿ ಹೂಡಿಕೆಯೂ ಸ್ಥಿತ್ಯಂತರಗೊಳ್ಳಲಿದೆ.
 
ಹೀಗಾಗಿ, ಈ ಫಂಡ್ ಸುಮಾರು ಎನ್‌ಎಸ್‌ಇ ಪಟ್ಟಿ ಆಧಾರದಲ್ಲಿ ಮಾರುಕಟ್ಟೆಯನ್ನು ಆವರಿಸಿರುವ 200 ಕಂಪನಿಗಳ ಪಟ್ಟಿಯಲ್ಲಿ ಸುಮಾರು 20 ರಿಂದ 25 ಷೇರುಗಳ ಮೇಲೆ ಹೂಡಿಕೆ ಮಾಡಲಿದೆ.

ಈ ಕಾರ್ಯತಂತ್ರ ಗರಿಷ್ಟ ಲಾಭ  ತಂದುಕೊಡುತ್ತಿದೆ. ಈ ಫಂಡ್ ನಿಯಮಿತವಾಗಿ ಉತ್ತಮ ಫಲಿತಾಂಶ ನೀಡುತ್ತಿದೆ. ಕಳೆದ ಒಂದು ವರ್ಷದಲ್ಲಿ ಶೇ 17.95ರಷ್ಟು ಮತ್ತು ವಹಿವಾಟು ಆರಂಭಿಸಿದ ದಿನದಿಂದ ಇದವರೆಗೆ ಶೇ 19.36ರಷ್ಟು ವರಮಾನ ತಂದುಕೊಟ್ಟಿದೆ. 

ಹೂಡಿಕೆದಾರರು ದೊಡ್ಡ ಗಾತ್ರದ ಉದ್ದಿಮೆಗಳ ಷೇರುಗಳಲ್ಲಿ (ಲಾರ್ಜ್ ಕ್ಯಾಪ್) ಹೂಡಿಕೆ ಮಾಡುವುದರಿಂದ ಹೆಚ್ಚು ಸುರಕ್ಷಿತವಾದ ಮತ್ತು  ಗರಿಷ್ಠ ಪ್ರಮಾಣ  ಷೇರು ಮಾರುಕಟ್ಟೆಯ ಲಾಭ ಪಡೆಯಲು ಸಾಧ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.