ADVERTISEMENT

ದೂರವಾಣಿ ಜಾಲ ಭದ್ರತೆಗೆ `ಟಿಎಸ್‌ಡಿ'

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 19:59 IST
Last Updated 5 ಆಗಸ್ಟ್ 2013, 19:59 IST

ನವದೆಹಲಿ(ಪಿಟಿಐ): ದೂರವಾಣಿ ಜಾಲ ವ್ಯವಸ್ಥೆ ಮೇಲೆ ಹ್ಯಾಕರ್‌ಗಳ ಕಣ್ಣು ಬಿದ್ದಿರುವ ಹಿನ್ನೆಲೆಯಲ್ಲಿ, `ದೂರಸಂಪರ್ಕ ಭದ್ರತಾ ಮಹಾ ನಿರ್ದೇಶನಾಲಯ'(ಟಿಎಸ್‌ಡಿ) ಸ್ಥಾಪಿಸುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ.

ದೂರವಾಣಿ ಇಲಾಖೆ (ಡಿಒಟಿ) ಇದಕ್ಕೆ ಸಂಬಂಧಿಸಿದಂತೆ ವರದಿ ಸಿದ್ಧಪಡಿಸಿ ಕೇಂದ್ರಕ್ಕೆ ಸಲ್ಲಿಸಿದ್ದು, `ಟಿಎಸ್‌ಡಿ' ಸದ್ಯದ ತುರ್ತು ಅಗತ್ಯ ಎಂದು ವಿವರಿಸಿದೆ.

ದೂರವಾಣಿ ಇಲಾಖೆಯ ಗುಪ್ತಚರ ಘಟಕ, ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ, ದೂರಸಂಪರ್ಕ ಜಾರಿ ಮತ್ತು ನಿಗಾ ಸಂಸ್ಥೆ, ರಾಷ್ಟ್ರೀಯ ಭದ್ರತಾ ಮಂಡಳಿ, ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಸೇರಿದಂತೆ ಹಲವು ಸಂಸ್ಥೆಗಳು ಈಗಾಗಲೇ ದೂರಸಂಪರ್ಕ ಜಾಲ ಭದ್ರತೆ ಬಗ್ಗೆ ನಿಗಾ ವಹಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.