ADVERTISEMENT

ದೇಬಜಾನಿ ಘೋಷ್‌ ನಾಸ್ಕಾಂನ ಮೊದಲ ನಿಯೋಜಿತ ಅಧ್ಯಕ್ಷೆ

ಪಿಟಿಐ
Published 12 ನವೆಂಬರ್ 2017, 19:30 IST
Last Updated 12 ನವೆಂಬರ್ 2017, 19:30 IST
ದೇಬಜಾನಿ ಘೋಷ್‌ ನಾಸ್ಕಾಂನ ಮೊದಲ ನಿಯೋಜಿತ ಅಧ್ಯಕ್ಷೆ
ದೇಬಜಾನಿ ಘೋಷ್‌ ನಾಸ್ಕಾಂನ ಮೊದಲ ನಿಯೋಜಿತ ಅಧ್ಯಕ್ಷೆ   

ನವದೆಹಲಿ: ಸಾಫ್ಟ್‌ವೇರ್‌ ಮತ್ತು ಸೇವಾ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟದ (ನಾಸ್ಕಾಂ) ಅಧ್ಯಕ್ಷೆಯಾಗಿ ದೇಬಜಾನಿ ಘೋಷ್‌ ಅವರನ್ನು ನೇಮಿಸಲಾಗಿದೆ.

ಆರ್‌. ಚಂದ್ರಶೇಖರ್‌ ಅವರ ಅಧಿಕಾರಾವಧಿಯು ಮುಂದಿನ ವರ್ಷದ ಮಾರ್ಚ್‌ನಲ್ಲಿ ಕೊನೆಗೊಳ್ಳುತ್ತಿದ್ದಂತೆ ದೇಬಜಾನಿ ಅವರು  ಅಧಿಕಾರ ಸ್ವೀಕರಿಸಲಿದ್ದಾರೆ.

ಇಂಟೆಲ್‌ನ ದಕ್ಷಿಣ ಭಾರತದ ಮಾಜಿ ವ್ಯವಸ್ಥಾಪಕ ನಿರ್ದೇಶಕಿಯಾಗಿರುವ ಘೋಷ್, ‘ನಾಸ್ಕಾಂ’ನ ಮೊದಲ ಅಧ್ಯಕ್ಷೆಯಾಗಲಿದ್ದಾರೆ. ಸದ್ಯಕ್ಕೆ ಇವರು ‘ನಾಸ್ಕಾಂ’ನ ಕಾರ್ಯನಿರ್ವಾಹಕ ಮಂಡಳಿಯ ಸದಸ್ಯೆ ಮತ್ತು ‘ನಾಸ್ಕಾಂ ಫೌಂಡೇಷನ್‌’ ಟ್ರಸ್ಟಿಯಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.