ADVERTISEMENT

ನೋಕಿಯಾ ಆಂಡ್ರಾಯ್ಡ್‌ ಫೋನ್‌ ಮಾರುಕಟ್ಟೆಗೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2017, 19:30 IST
Last Updated 16 ಜೂನ್ 2017, 19:30 IST
ನೋಕಿಯಾ ಆಂಡ್ರಾಯ್ಡ್‌ ಫೋನ್‌ ಮಾರುಕಟ್ಟೆಗೆ
ನೋಕಿಯಾ ಆಂಡ್ರಾಯ್ಡ್‌ ಫೋನ್‌ ಮಾರುಕಟ್ಟೆಗೆ   

ಬೆಂಗಳೂರು:  ನೋಕಿಯಾ  ಬ್ರ್ಯಾಂಡ್‌ನ ಮೊಬೈಲ್‌ಗಳನ್ನು ಮಾರಾಟ ಮಾಡುವ  ಎಚ್‌ಎಂಡಿ ಗ್ಲೋಬಲ್‌,  ಆಂಡ್ರಾಯ್ಡ್‌ ಆಧಾರಿತ ನೋಕಿಯಾ–3 ಮೊಬೈಲ್‌ ಫೋನ್‌ ಅನ್ನು ಶುಕ್ರವಾರ  ಇಲ್ಲಿ ರಾಜ್ಯದ ಮಾರುಕಟ್ಟೆಗೆ ಬಿಡುಗಡೆ ಮಾಡಿತು.

‘ಕಡಿಮೆ ಬೆಲೆಗೆ ಗುಣಮಟ್ಟದ ಫೋನ್‌ ಪರಿಚಯಿಸುತ್ತಿದ್ದೇವೆ’ ಎಂದು  ಎಚ್‌ಎಂಡಿ ಗ್ಲೋಬಲ್ ನಿರ್ದೇಶಕ ಪ್ರಣವ್ ಶ್ರಾಫ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ‘ಲೋಹದ ಕವಚದ ರಕ್ಷಣೆ ಒದಗಿಸಲಾಗಿದೆ. ಪೂರ್ಣ ಲ್ಯಾಮಿನೇಟೆಡ್‌ ಐಪಿಎಸ್‌ ಡಿಸ್‌ಪ್ಲೇ ಹೊಂದಿದೆ.  ಬಿಸಿಲಿನಲ್ಲೂ ಡಿಸ್‌ಪ್ಲೇ ಸ್ಪಷ್ಟವಾಗಿ ಗೋಚರಿಸುವಂತೆ ಪೊಲರೈಸ್ಡ್‌ ಸ್ಕ್ರೀನ್ ಅಳವಡಿಸಲಾಗಿದೆ.

ಗೊರಿಲ್ಲಾ ಗ್ಲಾಸ್‌ ರಕ್ಷಣೆಯಿದ್ದು, ಸ್ಪಷ್ಟ ಚಿತ್ರಗಳನ್ನು ಸೆರೆಹಿಡಿಯಲು ಹಿಂಬದಿ ಮತ್ತು ಮುಂಬದಿ ಉತ್ತಮ ಕ್ಯಾಮೆರಾಗಳು ಇವೆ. ಜೊತೆಗೆ ಗೂಗಲ್‌ನ ಸುಧಾರಿತ ಅಂಡ್ರಾಯ್ಡ್‌ ತಂತ್ರಾಂಶವನ್ನು ಅಳವಡಿಸಲಾಗಿದೆ. ಗೂಗಲ್‌ನ ಸೆಕ್ಯೂರಿಟಿ ಪ್ಯಾಚ್‌ಗಳನ್ನು  ಪ್ರತಿ ತಿಂಗಳೂ ಅಪ್‌ಡೇಟ್‌ ಮಾಡಿಕೊಳ್ಳಬಹುದು’ ಎಂದರು.

ADVERTISEMENT

ನೋಕಿಯಾ–3 ಖರೀದಿಸುವವರಿಗೆ ವೋಡಾಫೋನ್‌ನಿಂದ ತಿಂಗಳಿಗೆ 5ಜಿಬಿ ಡೇಟಾದಂತೆ 3 ತಿಂಗಳವರೆಗೆ ₹ 149ಕ್ಕೆ ಡೇಟಾ ನೀಡಲಾಗಿದೆ.

ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳು
* ಡ್ಯೂಯಲ್ ಸಿಮ್‌. ಅಂಡ್ರಾಯ್ಡ್‌ ತಂತ್ರಾಂಶ: ನೋಗಟ್‌ 7.0
* ಸಿಪಿಯು: ಎಂಟಿಕೆ 6737, ಕ್ವಾಡ್‌ ಕೋರ್‌ 1.3 ಗಿಗಾಹರ್ಟ್ಸ್‌
* ರ್‍ಯಾಮ್: 2ಜಿಬಿ. ಸಂಗ್ರಹ ಸಾಮರ್ಥ್ಯ: 16 ಜಿಬಿ. 128 ಜಿಬಿವರೆಗೆ
ವಿಸ್ತರಿಸಬಹುದು
*ಡಿಸ್‌ಪ್ಲೇ: 5 ಇಂಚುಗಳ ಎಲ್‌ಸಿಡಿ ಎಚ್‌ಡಿ ಪರದೆ
*  ಕ್ಯಾಮೆರಾ: ಹಿಂಬದಿ ಕ್ಯಾಮೆರಾ  8 ಮೆಗಾಪಿಕ್ಸಲ್‌. ಫ್ಲ್ಯಾಷ್‌ಲೈಟ್ ಸೌಲಭ್ಯವಿದೆ. ಮುಂಬದಿ ಕ್ಯಾಮೆರಾ 8 ಮೆಗಾಪಿಕ್ಸಲ್‌ ಗುಣಮಟ್ಟದ್ದಾಗಿದ್ದು ಡಿಸ್‌ಪ್ಲೇ ಫ್ಲಾಷ್‌ ಸೌಲಭ್ಯವಿದೆ.
* 2630 ಇಂಟಿಗ್ರೇಟೆಡ್‌ ಎಂಎಎಚ್‌ ಬ್ಯಾಟರಿ. ಬೆಲೆ: ₹ 9,499

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.