ADVERTISEMENT

‘ಪಿಎನ್‌ಬಿ’ಗೆ ನಷ್ಟ

ಪಿಟಿಐ
Published 15 ಮೇ 2018, 19:30 IST
Last Updated 15 ಮೇ 2018, 19:30 IST
‘ಪಿಎನ್‌ಬಿ’ಗೆ ನಷ್ಟ
‘ಪಿಎನ್‌ಬಿ’ಗೆ ನಷ್ಟ   

ನವದೆಹಲಿ: ವಂಚನೆ ಹಗರಣದ ಸುಳಿಗೆ ಸಿಲುಕಿರುವ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ), 4ನೇ ತ್ರೈಮಾಸಿಕದಲ್ಲಿ ₹ 13,417 ಕೋಟಿಗಳಷ್ಟು ನಷ್ಟಕ್ಕೆ ಗುರಿಯಾಗಿದೆ.

ವಸೂಲಾಗದ ಸಾಲಗಳಿಗೆ (ಭವಿಷ್ಯದ ವೆಚ್ಚಗಳಿಗೆ) ಗರಿಷ್ಠ ಮೊತ್ತವನ್ನು ತೆಗೆದಿರಿಸಿದ್ದರಿಂದ ಈ ಭಾರಿ ಮೊತ್ತದ ನಷ್ಟ ಉಂಟಾಗಿದೆ. 2016–17ರ ಇದೇ ಅವಧಿಯಲ್ಲಿ ಬ್ಯಾಂಕ್‌ ₹ 262 ಕೋಟಿ ನಿವ್ವಳ ಲಾಭ ಗಳಿಸಿತ್ತು.

4ನೇ ತ್ರೈಮಾಸಿಕದಲ್ಲಿನ ಒಟ್ಟು ವರಮಾನವೂ ಹಿಂದಿನ ವರ್ಷದ ₹ 14,989 ಕೋಟಿಗಳಿಂದ ₹ 12,945 ಕೋಟಿಗಳಿಗೆ ಇಳಿದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.