
ಪ್ರಜಾವಾಣಿ ವಾರ್ತೆನವದೆಹಲಿ(ಪಿಟಿಐ): ಪೆಟ್ರೋಲಿಯಂ ಕಂಪೆನಿಗಳು ಹದಿನೈದು ದಿನಗಳಿಗೊಮ್ಮೆ ತೈಲೋತ್ಪನ್ನಗಳ ದರ ಪರಿಷ್ಕರಿಸಬೇಕಿದ್ದು, ಈ ವಾಯಿದೆಯಂತೆ ಶುಕ್ರವಾರ ಪೆಟ್ರೋಲ್ ಬೆಲೆ ಇಳಿಸದೆ ನಿರೀಕ್ಷೆ ಹುಸಿಗೊಳಿಸಿವೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿದಿದ್ದರಿಂದ ಭಾರತದಲ್ಲಿಯೂ ಪೆಟ್ರೋಲ್ ದರ ತಗ್ಗಲಿದೆ. ಲೀಟರ್‌ಗೆ ಕನಿಷ್ಠ ರೂ. 1.60 ಕಡಿಮೆ ಆಗಲಿದೆ ಎಂಬ ನಿರೀಕ್ಷೆ ಇದ್ದಿತು.`ದರ ಇಳಿಕೆ ಬಗ್ಗೆ ಇಂದು ಯಾವುದೇ ಸುದ್ದಿ ಇಲ್ಲ~ ಎಂದು ಪೆಟ್ರೋಲಿಯಂ ಕಂಪೆನಿಯೊಂದರ ಹಿರಿಯ ಅಧಿಕಾರಿ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.