ADVERTISEMENT

ಫೋರ್ಟಿಸ್‌ ಸಲಹೆಗೆ ಆರ್ಪ್‌ವುಡ್‌ ಕ್ಯಾಪಿಟಲ್‌

ಹೂಡಿಕೆ ಕೊಡುಗೆ ಸಲಹೆಗೆ ಆರ್ಪ್‌ವುಡ್‌ ಕ್ಯಾಪಿಟಲ್‌: ಫೋರ್ಟಿಸ್‌

ಪಿಟಿಐ
Published 5 ಮೇ 2018, 19:12 IST
Last Updated 5 ಮೇ 2018, 19:12 IST

ನವದೆಹಲಿ: ವಿವಿಧ ಹೂಡಿಕೆ ಕೊಡುಗೆಗಳ ಬಗ್ಗೆ ಆರ್ಥಿಕ ಸಲಹೆ ಪಡೆಯುವ ಉದ್ದೇಶದಿಂದ ಆರ್ಪ್‌ವುಡ್‌ ಕ್ಯಾಪಿಟಲ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯನ್ನು ನೇಮಿಸಿದೆ.

ಈ ಸಂಸ್ಥೆಯು ವಿವಿಧ ಸಂಸ್ಥೆಗಳು ನೀಡಿರುವ ಮತ್ತು ನೀಡಲಿರುವ ಹೂಡಿಕೆ ಕೊಡುಗೆಗಳ ಬಗ್ಗೆ ತನ್ನ ಸ್ವತಂತ್ರವಾದ ಅಭಿಪ್ರಾಯಗಳನ್ನು ನೀಡಲಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.

ಆರ್ಪ್‌ವುಡ್‌ ಕ್ಯಾಪಿಟಲ್‌ ಸಂಸ್ಥೆಯು ಹೂಡಿಕೆ ಬ್ಯಾಂಕಿಂಗ್‌ ಸಂಸ್ಥೆಯಾಗಿದ್ದು, ಕಾರ್ಪೊರೇಟ್‌ ವಲಯದಲ್ಲಿ ವಿಲೀನ, ಸ್ವಾಧೀನ ಮತ್ತು ಬಂಡವಾಳ ಸಂಗ್ರಹಕ್ಕೆ ಸಂಬಂಧಿಸಿದಂತೆ ಸಲಹೆಗಳನ್ನು ನೀಡುತ್ತದೆ.

ADVERTISEMENT

ಮೇ 10ರಂದು ಸಭೆ: ಫೋರ್ಟಿಸ್‌ನ ಆಡಳಿತ ಮಂಡಳಿ ಮೇ 10ರಂದು ಸಭೆ ಸೇರಲಿದ್ದು, ಹೂಡಿಕೆ ಕೊಡುಗೆಗಳ ಬಗ್ಗೆ ಸಲಹಾ ಸಮಿತಿ ನೀಡಿರುವ ಶಿಫಾರಸುಗಳನ್ನು ಪರಿಶೀಲನೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.

ಫೋರ್ಟಿಸ್‌ ಷೇರು ಖರೀದಿಗೆ ಪ್ರಮುಖ ಕಂಪನಿಗಳು ಪ್ರಬಲ ಪೈಪೋಟಿ ನಡೆಸುತ್ತಿವೆ. ತಮ್ಮ ಹೂಡಿಕೆ ಕೊಡುಗೆಗಳನ್ನು ಪರಿಷ್ಕರಣೆ ಮಾಡಿ ಸೆಳೆಯುವ ಯತ್ನ ನಡೆಸುತ್ತಿವೆ.

ಮುಖ್ಯವಾಗಿ ರೇಡಿಯಂಟ್ ಲೈಫ್‌ ಕೇರ್‌, ಮಲೇಷ್ಯಾದ ಐಎಚ್‌ಎಚ್‌ ಹೆಲ್ತ್‌ಕೇರ್‌, ಮಣಿಪಾಲ್‌/ಟಿಪಿಜಿ ಒಕ್ಕೂಟ ಮತ್ತು ಮುಂಜಾಲ್‌ ಮತ್ತು ಬರ್ಮನ್‌ ಫ್ಯಾಮಿಲಿ ಷರತ್ತು ಬದ್ಧವಾಗಿ ಫೋರ್ಟಿಸ್‌ನಲ್ಲಿ ಹೂಡಿಕೆಗೆ ಮುಂದಾಗಿವೆ.

ಚೀನಾದ ಫೋಸನ್‌ ಹೆಲ್ತ್ ಹೋಲ್ಡಿಂಗ್ಸ್‌ ಸಂಸ್ಥೆಯು ಯಾವುದೇ ಷರತ್ತುಗಳಲ್ಲಿಲ್ಲದೇ ₹ 2,295 ಕೋಟಿ ಹೂಡಿಕೆ ಮಾಡುವುದಾಗಿ ಹೇಳಿದೆ.

*

ಆರ್‌ಎಚ್‌ಟಿ ಹೆಲ್ತ್‌ ಟ್ರಸ್ಟ್‌ ಸ್ವಾಧೀನಕ್ಕೆ ಒಪ್ಪಿಗೆ

ಸಿಂಗಪುರದ ಆರ್‌ಎಚ್‌ಟಿ ಹೆಲ್ತ್‌ ಟ್ರಸ್ಟ್‌ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳಲು ಸಂಸ್ಥೆಯ ಪಾಲುದಾರರು ಒಪ್ಪಿಗೆ ನೀಡಿದ್ದಾರೆ ಎಂದು ಫೋರ್ಟಿಸ್‌ ಹೆಲ್ತ್‌ ಕೇರ್‌ ತಿಳಿಸಿದೆ.

ಶೇ 98.32 ರಷ್ಟು ಪಾಲುದಾರರು ಸ್ವಾಧೀನದ ಪರವಾಗಿ ಶೇ 1.68 ರಷ್ಟು ಪಾಲುದಾರರು ಸ್ವಾಧೀನದ ವಿರುದ್ಧ ಮತ ಚಲಾಯಿಸಿದ್ದಾರೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.

₹ 4,650 ಕೋಟಿಗೆ ಸಿಂಗಪುರದ ಕಂಪನಿಯ ಎಲ್ಲಾ ವಹಿವಾಟುಗಳನ್ನೂ ಸ್ವಾಧೀನಕ್ಕೆ ಪಡೆಯುವ ಸಂಬಂಧ ಫೆಬ್ರುವರಿಯಲ್ಲಿ ಒಪ್ಪಂದ ಮಾಡಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.