ADVERTISEMENT

ಫ್ಲಿ‍‍ಪ್‌ಕಾರ್ಟ್‌ನಲ್ಲಿನ ಶೇ 20ರಷ್ಟು ಷೇರು ಮಾರಾಟಕ್ಕೆ ಸಾಫ್ಟ್‌ಬ್ಯಾಂಕ್‌ ನಿರ್ಧಾರ

ಪಿಟಿಐ
Published 23 ಮೇ 2018, 19:30 IST
Last Updated 23 ಮೇ 2018, 19:30 IST
ಸಾಫ್ಟ್‌ಬ್ಯಾಂಕ್‌ ಸಿಇಒ ಮಸಯೋಶಿ ಸನ್‌
ಸಾಫ್ಟ್‌ಬ್ಯಾಂಕ್‌ ಸಿಇಒ ಮಸಯೋಶಿ ಸನ್‌   

ನವದೆಹಲಿ: ಫ್ಲಿಪ್‌ಕಾರ್ಟ್‌ನಲ್ಲಿನ ತನ್ನ ಶೇ 20 ರಷ್ಟು ಪಾಲು ಬಂಡವಾಳವನ್ನು ಅಮೆರಿಕದ ರಿಟೇಲ್‌ ಸಂಸ್ಥೆ ವಾಲ್‌ಮಾರ್ಟ್‌ಗೆ ಮಾರಾಟ ಮಾಡಲು ಜಪಾನಿನ ಆರ್ಥಿಕ ಒಕ್ಕೂಟ ಸಾಫ್ಟ್‌ಬ್ಯಾಂಕ್‌ ಗ್ರೂಪ್‌ ಕಾರ್ಪ್‌ ನಿರ್ಧರಿಸಿದೆ.

ಭಾರತದ ಅತಿದೊಡ್ಡ ಆನ್‌ಲೈನ್‌ ರಿಟೇಲರ್‌ ಫ್ಲಿಪ್‌ಕಾರ್ಟ್‌ನಿಂದ ಹೊರ ನಡೆಯುವ  ಬಗ್ಗೆ ಸಾಫ್ಟ್‌ಬ್ಯಾಂಕ್‌  ಕೊನೆಗೂ ನಿರ್ಧಾರಕ್ಕೆ ಬಂದಿದೆ. ಈ ಪಾಲು ಬಂಡವಾಳ ಮಾರಾಟದ ವಿವರಗಳನ್ನು ನೀಡಲು ಸಾಫ್ಟ್‌ಬ್ಯಾಂಕ್‌ನ ವಕ್ತಾರರು ನಿರಾಕರಿಸಿದ್ದಾರೆ. ಈ ನಿರ್ಧಾರವು, ಫ್ಲಿಪ್‌ಕಾರ್ಟ್‌ನಲ್ಲಿಯೇ ಉಳಿಯುವ ಅಥವಾ ಹೊರ ನಡೆಯುವುದಕ್ಕೆ ಸಂಬಂಧಿಸಿದ ಎರಡು ವಾರಗಳ ಅನಿಶ್ಚಿತತೆಗೆ ಕೊನೆ ಹಾಡಿದೆ. ಶೇ 20ರಷ್ಟು ಪಾಲು ಬಂಡವಾಳವನ್ನು ಸಾಫ್ಟ್‌ಬ್ಯಾಂಕ್‌ ₹ 26 ಸಾವಿರ ಕೋಟಿಗಳಿಗೆ ಮಾರಾಟ ಮಾಡಲಿದೆ ಎಂದು ಅಂದಾಜಿಸಲಾಗಿದೆ.

ಸಾಫ್ಟ್‌ಬ್ಯಾಂಕ್‌, ಫ್ಲಿಪ್‌ಕಾರ್ಟ್‌ನಲ್ಲಿ ಕಳೆದ ವರ್ಷ ₹ 16,250 ಕೋಟಿಗಳಷ್ಟು ಬಂಡವಾಳ ತೊಡಗಿಸಿತ್ತು. ಸಂಸ್ಥೆಯ ಮತ್ತು ಹೂಡಿಕೆದಾರರ ಹಿತಾಸಕ್ತಿ ರಕ್ಷಣೆ ಉದ್ದೇಶಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಸಾಫ್ಟ್‌ಬ್ಯಾಂಕ್‌ ಈಗ ಫ್ಲಿಪ್‌ಕಾರ್ಟ್‌ನ ಪ್ರತಿಸ್ಪರ್ಧಿ ಸಂಸ್ಥೆ ‘ಪೇಟಿಎಂ ಮಾಲ್‌’ನಲ್ಲಿ ಪ್ರಮುಖ ಹೂಡಿಕೆ ಸಂಸ್ಥೆಯಾಗಿರಲಿದೆ. ‘ಪೇಟಿಎಂ ಮಾಲ್‌’ನಲ್ಲಿನ ತನ್ನ ಪಾಲು ಬಂಡವಾಳದ ಪ್ರಮಾಣ ಹೆಚ್ಚಿಸಲು ಸಾಫ್ಟ್‌ಬ್ಯಾಂಕ್‌ ಗಮನ ಕೇಂದ್ರೀಕರಿಸಲಿದೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.