ನವದೆಹಲಿ: ದೇಶದ ಪ್ರಮುಖ ಷೇರುಪೇಟೆಯಾಗಿರುವ ಮುಂಬೈ ಷೇರು ವಿನಿಮಯ ಕೇಂದ್ರವು 2017–18ನೇ ಹಣಕಾಸು ವರ್ಷದ ಜನವರಿ–ಮಾರ್ಚ್ ಅವಧಿಯಲ್ಲಿ ₹62.08 ಕೋಟಿ ನಿವ್ವಳ ಲಾಭ ಗಳಿಸಿದೆ.
2016–17ರ ಇದೇ ತ್ರೈಮಾಸಿಕ ದಲ್ಲಿ ₹ 60.11 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಲಾಭದ ಪ್ರಮಾಣ ಶೇ 3 ರಷ್ಟು ಏರಿಕೆ ಕಂಡಿದೆ. ಕಾರ್ಯಾಚರಣೆ ವರಮಾನ ₹ 114.83 ಕೋಟಿಗಳಿಂದ ₹ 136.57 ಕೋಟಿಗೆ ಶೇ 19 ರಷ್ಟು ಏರಿಕೆಯಾಗಿದೆ. ವಾಯಿದಾ ವಹಿವಾಟು ಶೇ 77 ರಷ್ಟು ಏರಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.